ರಾಮನಗರ : ಮನೆಯ ಮುಂದೆ ಜಗಲಿ ಮೇಲೆ ಮಲಗಿದ್ದ ವೃದ್ಧೆ ಚಿರತೆ ದಾಳಿಯಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕೊತ್ತಗಾನಹಳ್ಳಿ ಗ್ರಾಮದ ಬಳಿ ನಡೆದಿದೆ. ಗಂಗಮ್ಮ(72) ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಗಂಗಮ್ಮ ತೀವ್ರ ಸೆಕೆ ಇದ್ದ ಕಾರಣ ತಮ್ಮ ಮನೆಯ ಮುಂದೆ ಜಗಲಿ ಮೇಲೆ ಮಲಗಿದ್ದರು. ಈ ವೇಳೆ ಚಿರತೆ ವೃದ್ಧೆ ಮೇಲೆ ದಾಳಿ ನಡೆಸಿದೆ. ಕಳೆದ ಒಂದು ವಾರದ ಹಿಂದೆಯೂ ಕೂಡಾ ಇದೇ ಗ್ರಾಮದಲ್ಲಿ 3 ವರ್ಷದ ಮಗುವೊಂದು ಚಿರತೆ ದಾಳಿಗೆ ಬಲಿಯಾಗಿತ್ತು. ನರಭಕ್ಷಕ ಚಿರತೆ ಹಾವಳಿಯಿಂದ ಗ್ರಾಮದ ಜನರು ಆತಂಕಕ್ಕೀಡಾಗಿದ್ದು, ಘಟನಾ ಸ್ಥಳಕ್ಕೆ ತಾವರೆಕೆರೆ ಠಾಣಾ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










