ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ 6ಮಂದಿ ಸಾವು…

188
firstsuddi

ಬೀದರ್ : ಮನೆಯ ಮೇಲ್ಛಾವಣಿ ಕುಸಿದು 6ಮಂದಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ನಗರದ ಚಿಲ್ಲಾ ಬಡಾವಣೆಯಲ್ಲಿ ನಡೆದಿದೆ. ನದೀಮ್ ಶೇಖ್(44), ಫರಿದಾ ಬೇಗಂ(35), ಆಯುಷಾ ಬಾನು (15), ಮೇಹತಾಬಿ(14), ಫಜಾನಲಿ(09) ಹಾಗೂ ಫರಾನ್ ಅಲಿ(05) ಮೃತ ದುರ್ದೈವಿಗಳು. ಮೃತರು ಬೆಳಗಿನಜಾವ ಗಾಢ ನಿದ್ದೆಯಲ್ಲಿದ್ದ ವೇಳೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ 6ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದಾರೆ.