ಚಿಕ್ಕೋಡಿ : ಮನೆ ಬಾಡಿಗೆ ಕಟ್ಟಿಲ್ಲವೆಂದು ಮನೆಯ ಮಾಲೀಕನೊಬ್ಬ ಬಾಡಿಗೆದಾರರಿಗೆ ಬಂದೂಕು ತೋರಿಸಿ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿರುವ ಘಟನೆ ಚಿಕ್ಕೋಡಿ ನಗರದಲ್ಲಿ ನಡೆದಿದೆ. ನಗರದ ಬಿ.ಕರ. ಕಾಲೇಜು ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ರೋಹಿಣಿ ಎಂಬ ಮಹಿಳೆ ಬಾಡಿಗೆ ನೀಡುವುದನ್ನು ಬಾಕಿ ಇರಿಸಿದ್ದರು. ಹೀಗಾಗಿ ಮನೆ ಮಾಲಿಯ ನಿನ್ನೆ ರಾತ್ರಿ ಕೂಡಲೇ ಮನೆಯನ್ನು ಖಾಲಿ ಮಾಡಬೇಕೆಂದು ಬಂದೂಕು ತೋರಿಸಿ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಕೆ ಹಾಕಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.










