ಮಹಾರಾಷ್ಟ್ರದ 7 ವರ್ಷದ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆ…

91
firstsuddi

ಮುಂಬೈ : ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಪಾಲ್ಗರ್ ಜಿಲ್ಲೆಯ 7 ವರ್ಷದ ಬಾಲಕಿಗೆ ಝಿಕಾ ವೈರಸ್ ತಗುಲಿದೆ. ಆರೋಗ್ಯ ಸಿಬ್ಬಂದಿ ಇವರ ಮೇಲೆ ನಿಗಾ ಇಟ್ಟಿದ್ದಾರೆ. ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

2021 ರ ಜುಲೈನಲ್ಲಿ ಪುಣೆಯಲ್ಲಿ ಮೊದಲ ಬಾರಿಗೆ ವ್ಯಕ್ತಿಯೊಬ್ಬರಿಗೆ ಝಿಕಾ ವೈರಸ್ ಕಾಣಿಸಿಕೊಂಡಿತ್ತು. ಇದಾದ ಬಳಿಕ ಇದು ರಾಜ್ಯದಲ್ಲಿ ಎರಡನೇ ಪ್ರಕರಣವಾಗಿದೆ.

ಏನಿದು ಝಿಕಾ ವೈರಸ್: ಝಿಕಾ ಎಂಬುದು ಸೊಳ್ಳೆಗಳಿಂದ ಹರಡುವ ರೋಗವಾಗಿದೆ. ಜ್ವರ, ಕೆಂಪು ಕಲೆಗಳು, ಸ್ನಾಯು, ಕೀಲುಗಳಲ್ಲಿ ನೋವು, ತಲೆ ನೋವು ಈ ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ.