ಬೆಂಗಳೂರು : ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ ಇರಲಿದ್ದು, ಮುಂದಿನ ವರ್ಷದಿಂದ ಸಿಇಟಿ ಮಾತ್ರ ಇರಲಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಅವರು ಹೇಳಿದರು.
ವಿಕಾಸಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಸರ್ಕಾರಿ ಸೀಟುಗಳಿಗೆ ಮಾತ್ರ ಸಿಇಟಿ ನಡೆಯುತ್ತಿತ್ತು. ಖಾಸಗಿ ಸೀಟುಗಳಿಗೆ ಕಾಮಿಡ್ ಕೆ ಸೀಟು ಮಾಡಲಾಗುತ್ತಿತ್ತು. ಇದೀಗ ಸಿಇಟಿ ಮತ್ತು ಕಾಮೆಡ್ ಕೆ ಎರಡನ್ನೂ ಒಟ್ಟಿಗೆ ನಡೆಸಲು ಸಮ್ಮತಿ ನೀಡಿದ್ದಾರೆ. ಹಾಗಾಗಿ ಹೇಗೆ ಪರೀಕ್ಷೆ ನಡೆಸಬೇಕು ಅಂತ ಚರ್ಚೆ ಮಾಡಿದ್ದೇವೆ. ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪ್ರತ್ಯೇಕ ಪರೀಕ್ಷೆ ಇರಲಿದೆ. ಮುಂದಿನ ವರ್ಷದಿಂದ ಸಿಇಟಿ ಮಾತ್ರ. ಕಾಮೆಡ್-ಕೆ, ಸಿಇಟಿ ಒಟ್ಟಿಗೆ ಏಕರೂಪದ ಸಿಇಟಿ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಒಡಂಬಡಿಕೆ ಆಗಲಿದೆ ಎಂದು ಮಾಹಿತಿ ನೀಡಿದರು.
ಈ ವರ್ಷ ಸೇರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಫೀಸ್ ಹೆಚ್ಚಿಸಲು ನಿರ್ಧಾರ ಮಾಡಲಾಗಿದೆ. 45% ಲೋವರ್ ಫೀಸ್, 30% ಹೈಯರ್ ಫೀಸ್ 25% ಮ್ಯಾನೇಜ್ಮೆಂಟ್ ಸೀಟ್ ಗೆ ಹೋಗಲಿದೆ. ಇಂಜಿನಿಯರಿಂಗ್ ಕಾಲೇಜುಗಳ ಜೊತೆ ಚರ್ಚೆಯಾಗಿದೆ. ಹಲವು ವಿಚಾರ ಚರ್ಚೆಯಾಗಿದೆ. ವಿದ್ಯಾರ್ಥಿಗಳಿಗೆ ಹೆಚ್ಚು ಫೀಸ್ ಸಂಗ್ರಹ ಮಾಡಬಾರದು. ನಿರ್ದಿಷ್ಟ ಶುಲ್ಕ ಮಾತ್ರ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಕೋರ್ಡಿನೇಷನ್ ಸಿಂಪಲ್ ಮಾಡುವ ಬಗ್ಗೆ ಚರ್ಚೆ ಆಗಿದೆ ಎಂದರು.










