ಲಕ್ನೋ: ಗ್ಯಾಂಗ್ ಸ್ಟರ್ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರನ್ನು ಜೈಲಿನಿಂದ ಕೋರ್ಟ್ಗೆ ಹಾಜರು ಪಡಿಸಲು ಆಂಬ್ಯುಲೆನ್ಸ್ ಬಳಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಿಜೆಪಿ ನಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗ್ಯಾಂಗ್ ಸ್ಟರ್ ಹಾಗೂ ರಾಜಕಾರಣಿಯಾದ ಮುಖ್ತಾರ್ ಅನ್ಸಾರಿ 22 ವರ್ಷಗಳ ಹಿಂದಿನ ಪ್ರಕರಣದಲ್ಲಿ ಪಂಜಾಬ್ ನ ರೋಪರ್ ಜೈಲಿನಿಂದ ನ್ಯಾಯಾಲಯಕ್ಕೆ ಹಾಜರು ಪಡಿಸಲು ಆಂಬ್ಯುಲೆನ್ಸ್ ಬಳಕೆ ಮಾಡಲಾಗಿತ್ತು. ಈ ಸಂಬಂಧ ಅನ್ಸಾರಿ ಸೇರಿ 12 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಡಾ.ಅಲ್ಕಾ ರೈ ಮತ್ತು ಶೇಷನಾಥ್ ರೈ ಮಾಡಿದ್ದರು ಎಂದು ಆರೋಪ ಕೇಳಿ ಬಂದಿದೆ. ಅದರಂತೆ ಇಬ್ಬರು ಆರೋಪಿಗಳಾದ ಅಲ್ಕಾ ರೈ ಮತ್ತು ಶೇಷನಾಥ್ ರೈ ಅವರನ್ನು ಪೊಲೀಸರು ಮೌ ಜಿಲ್ಲೆಯಲ್ಲಿ ಬಂಧಿಸಿ, ಬಾರಾಬಂಕಿಗೆ ಕರೆದೊಯ್ದಿದ್ದಾರೆ.










