ಮೂಡಿಗೆರೆ : ಬಿ.ಹೊಸಹಳ್ಳಿ ಕೆರೆಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲು…

2902
firstsuddi

ಮೂಡಿಗೆರೆ : ಕೆರೆಯಲ್ಲಿ ಈಜಲು ತೆರಳಿದ್ದ ಯುವಕ ನೀರು ಪಾಲಾಗಿರುವ ಘಟನೆ ತಾಲ್ಲೂಕಿನ ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಾಳಿಂಗನಾಡು ಗ್ರಾಮದ ಅವಿನಾಶ್(22) ಮೃತ ಯುವಕ ಎಂದು ಗುರುತಿಸಲಾಗಿದ್ದು, ಅವಿನಾಶ್ ಸ್ನೇಹಿತರೊಂದಿಗೆ ಸೇರಿ ಬಿ.ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ನೀರು ಪಾಲಾಗಿದ್ದು, ಯುವಕನ ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದ್ದು, ಯುವಕನ ಮೃತದೇಹಕ್ಕಾಗಿ ಸ್ಥಳೀಯರು ಹಾಗೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದು, ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.