ಮೂಡಿಗೆರೆ : ಕ್ಯಾನ್ಸರ್ ಪೀಡಿತ ಮಹಿಳೆಗೆ ಬೇಕು ನೆರವಿನ ಹಸ್ತ…

436
firstsuddi

ಕೊಟ್ಟಿಗೆಹಾರ : ಪಟ್ಟಣದ ಕುವೆಂಪುನಗರದ ಗೀತಾ ಅವರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದು ದಾನಿಗಳಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಗುಡ್ಡಟ್ಟಿಯ ಅಂಗನವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕುವೆಂಪುನಗರದ ಸಿ.ಎಸ್ ಗೀತಾ ಅವರಿಗೆ ಮೇ ತಿಂಗಳಲ್ಲಿ ಸ್ತನ ಕ್ಯಾನ್ಸರ್ ನ ಲಕ್ಷಣಗಳು ಕಾಣಿಸಿಕೊಂಡಿದ್ದು ಚಿಕ್ಕಮಗಳೂರಿನಲ್ಲಿ ಪರೀಕ್ಷಿಸಿದಾಗ ಸ್ತನ ಕ್ಯಾನ್ಸರ್ ದೃಡಪಟ್ಟಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜುಲೈ ತಿಂಗಳಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದು 5 ದಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಈಗ ಕುವೆಂಪುನಗರದ ತಮ್ಮ ಮನೆಯಲ್ಲಿರುವ ಗೀತಾ ಅವರು ಚಿಕಿತ್ಸೆಯ ಭಾಗವಾಗಿ 11 ಚುಚ್ಚುಮದ್ದನ್ನು ಹಾಕಿಸಿಕೊಳ್ಳಬೇಕಾಗಿದ್ದು ಇದಕ್ಕೆ ಸುಮಾರು 3 ಲಕ್ಷದ ಅವಶ್ಯಕತೆ ಇದೆ. ಜೊತೆಗೆ ಪ್ರತಿ ಬಾರಿ ಚುಚ್ಚುಮದ್ದು ಪಡೆಯಲು ಬಣಕಲ್‍ನಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಹೋಗಬೇಕಾಗಿದು ಸಾವಿರಾರು ರೂ ನೀಡಿ ಬಾಡಿಗೆ ವಾಹನದಲ್ಲಿ ಹೋಗಬೇಕಾಗಿದೆ.

ಅಂಗನವಾಡಿ ಕಾರ್ಯಕರ್ತೆಯಾಗಿ ದುಡಿದು ಮನೆಯ ಖರ್ಚು ನಿಭಾಯಿಸುತ್ತಿದ್ದ ಗೀತಾ ಅವರು ಹಾಸಿಗೆ ಹಿಡಿದಿರುವುದು ಗೀತಾ ಅವರನ್ನೆ ಅವಲಂಭಿಸಿರುವ ವಯಸ್ಸಾದ ತಾಯಿ ಹಾಗೂ 8 ವರ್ಷದ ಮಗಳಿಗೆ ದಿಕ್ಕು ತೋಚದಂತಾಗಿದೆ. ಬೇರೆ ಯಾವುದೇ ಆದಾಯದ ಮೂಲವಿಲ್ಲದ ಗೀತಾ ಅವರ ಚಿಕಿತ್ಸೆಗೆ ನೆರವಿನ ಅಗತ್ಯವಿದ್ದು ನೆರವು ನೀಡುವವರು ಗೀತಾ ಅವರ ಬಣಕಲ್ ಡಿಸಿಸಿ ಬ್ಯಾಂಕಿನ ಖಾತೆ ಸಂಖ್ಯೆ:620050027145. ಐಎಪ್‍ಎಸ್‍ಸಿ ಕೋಡ್:ಕೆಎಸ್‍ಸಿಬಿ0012001 ಗೆ ನೆರವು ನೀಡಬಹುದು. ಗೀತಾ ಅವರ ಮೊಬೈಲ್ ಸಂಖ್ಯೆ:9448781047