ಮೂಡಿಗೆರೆ : ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮೊದಲ ಆಧ್ಯತೆ : ಎಂ.ಪಿ. ಕುಮಾರಸ್ವಾಮಿ.

187
firstsuddi

ಕೊಟ್ಟಿಗೆಹಾರ ; ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮೊದಲ ಆಧ್ಯತೆಯಾಗಿದು, ಗ್ರಾಮೀಣ ಭಾಗದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಹೇಳಿದರು. ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜಾವಳಿ ಮಲೆಮನೆ 700 ಮೀಟರ್ ಕಾಂಕ್ರೇಟ್ ರಸ್ತೆ 50 ಲಕ್ಷ ಹಾಗೂ ಮತ್ತಿಕಟ್ಟೆ ಬಸನಿ ಹೆಗ್ಗುಡ್ಲು 2 ಕಿ.ಮಿ ಡಾಂಬಾರೀಕರಣಕ್ಕೆ 76 ಲಕ್ಷ, ಲೋಕವಳ್ಳಿ ಭಾರತಿಬೈಲ್ ಗಬ್ಗಲ್ ರಸ್ತೆ 5 ಕಿ.ಮಿ ಡಾಂಬಾರೀಕರಣಕ್ಕೆ 1 ಕೋಟಿ 69 ಲಕ್ಷ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ಕುಗ್ರಾಮಗಳಿಗೆ ರಸ್ತೆ ಸಂಪರ್ಕ ಮಾಡುವ ಮೂಲಕ ಅಭಿವೃದ್ದಿಗೆ ಸಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಇದ್ದರು.