ಮೂಡಿಗೆರೆ : ಚಾರ್ಮಾಡಿ ಘಾಟ್‍ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದವರ ವಿರುದ್ಧ ಕಾನೂನು ಕ್ರಮ…

2976
firstsuddi

ಮೂಡಿಗೆರೆ : ಸೋಮವಾರ ಚಾರ್ಮಾಡಿ ಘಾಟಿಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಸತೀಶ್ ಎಂಬ ಬೆಳ್ತಂಗಡಿ ಮೂಲದ ಯುವಕ 100 ಅಡಿ ಎತ್ತರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದು, ಇದರಿಂದ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಚಾರ್ಮಾಡಿ ಘಾಟ್‍ನಲ್ಲಿ ನಡೆಯುತ್ತಿದ್ದ ಮೋಜು ಮಸ್ತಿಗೆ ಬ್ರೇಕ್ ಹಾಕಿದ್ದಾರೆ.
ಧರ್ಮಸ್ಥಳ ಹಾಗೂ ಮಂಗಳೂರಿಗೆ ಹೋಗುವ ಪ್ರವಾಸಿಗರು ವಾಹನವನ್ನು ಎಲ್ಲೆಂದರೆ ಅಲ್ಲೇ ನಿಲ್ಲಿಸಿ ಹರಿಯುವ ಕಿರು ಜಲಪಾತಗಳ ಮೇಲೇರಿ ಮಧ್ಯ ಸೇವಿಸಿ ಮೋಜು ಮಸ್ತಿ ಮಾಡುತ್ತಿದ್ದರು. ಪೊಲೀಸ್ ಇಲಾಖೆಯ ಗಸ್ತು ವಾಹನ ಚಾರ್ಮಾಡಿ ಘಾಟಿಯಲ್ಲಿ ತಪಾಸಣೆ ನಡೆಸುತ್ತಿದ್ದು, ಪ್ರವಾಸಿಗರಿಗೆ ಜಲಪಾತಗಳ ಮೇಲೆ ಹತ್ತದಂತೆ ಎಚ್ಚರಿಕೆ ನೀಡಿದ್ದು, ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದವರ ಮೇಲೆ ಕಾನೂನು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.