ಮೂಡಿಗೆರೆ ಪಿ.ಎಸ್. ಐ. ರಮೇಶ್ ನೇತೃತ್ವದಲ್ಲಿ ದಾಳಿ 5 ಮೂಟೆ ಅನ್ನಭಾಗ್ಯ ಅಕ್ಕಿ ವಶ…

687
ಮೂಡಿಗೆರೆ  : ಅಕ್ರಮವಾಗಿ ಸಾಗಿಸುತ್ತಿದ್ದ 5 ಮೂಟೆ ಅನ್ನಭಾಗ್ಯ ಅಕ್ಕಿ  ವಶಪಡಿಸಿಕೊಂಡಿರೋ ಘಟನೆ  ಮೂಡಿಗೆರೆ ಸಮೀಪದ ಬಿಳಗುಳದಲ್ಲಿ ನಡೆದಿದೆ. ಹಾಸನ ಮೂಲದ ಲಾರಿಯಲ್ಲಿ ಮೂಡಿಗೆರೆ ಕಡೆಯಿಂದ ಚಿಕ್ಕಮಗಳೂರಿಗೆ ಸಾಗಿಸುವಾಗ  ಮೂಡಿಗೆರೆ ಪಿಎಸ್ ಐ ರಮೇಶ್ ದಾಳಿ ನಡೆಸಿ 5 ಮೂಟೆ ಅನ್ನಭಾಗ್ಯ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.ಲಾರಿ ಹಾಗೂ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ