ಮೂಡಿಗೆರೆ : ಪೊಲೀಸ್ ಸ್ನೇಹಕೂಟ ಕ್ಷೇಮಾಭಿವೃದ್ದಿ ಸೊಸೈಟಿ ವತಿಯಿಂದ ಸುಂದರ್ ಚಿಕಿತ್ಸೆಗೆ ನೆರವು…

555
firstsuddi

ಕೊಟ್ಟಿಗೆಹಾರ : ಪೊಲೀಸ್ ಸ್ನೇಹಕೂಟ ಕ್ಷೇಮಾಭಿವೃದ್ದಿ ಸೊಸೈಟಿಯ ವತಿಯಿಂದ ಬಾಳೂರು ಗ್ರಾ.ಪಂ ವ್ಯಾಪ್ತಿಯ ಚನ್ನಡ್ಲು ಗ್ರಾಮದ ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಸುಂದರ್ ಅವರ ಚಿಕಿತ್ಸೆಗೆ 25 ಸಾವಿರ ಧನಸಹಾಯ ಹಾಗೂ ಆಹಾರದ ಕಿಟ್‍ನ್ನು ವಿತರಿಸಲಾಯಿತು.
ಪೊಲೀಸ್ ಸ್ನೇಹಕೂಟ ಕ್ಷೇಮಾಭೀವೃದ್ದಿ ಸೊಸೈಟಿಯ ಅಧ್ಯಕ್ಷರಾದ ಎಂ.ಕೆ ಮಧು ಅವರು ಮಾತನಾಡಿ, ಚಿಕ್ಕಮಗಳೂರು ಹಾಗೂ ಮೈಸೂರು ಜಿಲ್ಲೆಯಲ್ಲಿ 2002ನೇ ಸಾಲಿನಲ್ಲಿ ನೇಮಕಗೊಂಡ ಪೊಲೀಸ್ ಸಿಬ್ಬಂದಿಗಳು, ಸಮಾನ ಮನಸ್ಕರು ಸೇರಿಕೊಂಡು ಪೊಲೀಸ್ ಸ್ನೇಹಕೂಟ ಕ್ಷೇಮಾಬೀವೃದ್ದಿ ಸೊಸೈಟಿಯನ್ನು ರಚಿಸಿಲಾಗಿದ್ದು, ಈ ಸೊಸೈಟಿಯ ಮೂಲಕ ಶೋಷಿತರ ಧಮನಿತರ, ನಿರ್ಲಕ್ಷ್ಯಕ್ಕೆ ಒಳಗಾದವರ ನೆರವಿಗೆ ನಿಲ್ಲುವ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಮಾಧ್ಯಮಗಳಲ್ಲಿ ಬಂದ ವರದಿಯ ಮೂಲಕ ಚನ್ನಡ್ಲು ಗ್ರಾಮದ ಸುಂದರ್ ಅವರ ಕುಟುಂಬ ತೀವ್ರ ಸಂಕಷ್ಟದಲ್ಲಿರುವ ವಿಷಯ ತಿಳಿದಿದ್ದು ಸುಂದರ್ ಅವರ ಚಿಕಿತ್ಸೆಗೆ ಸಹಾಯ ಮಾಡುವ ದೃಷ್ಟಿಯಿಂದ 25 ಸಾವಿರ ಧನ ಸಹಾಯ ಹಾಗೂ ಆಹಾರದ ಕಿಟ್‍ನ್ನು ವಿತರಿಸಲಾಗಿದೆ. ಸ್ನೇಹಕೂಟ ಸೊಸೈಟಿಯ ಸದಾ ಆ ಕುಟುಂಬಕ್ಕೆ ನೈತಿಕವಾಗಿ ಬೆಂಬಲವಾಗಿ ನಿಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಸ್ನೇಹಕೂಟ ಕ್ಷೇಮಾಭೀವೃದ್ದಿ ಸೊಸೈಟಿಯ ಉಪಾಧ್ಯಕ್ಷರಾದ ಪ್ರವೀಣ್ ಪೊನ್ನಪ್ಪ, ನಿರ್ದೇಶಕರಾದ ವಿಜಯಶಂಕರ್, ನಟರಾಜ್,ರಾಮಪ್ಪ, ಸುರೇಶ್,ನವೀನ್ ಇದ್ದರು.