ಕೊಟ್ಟಿಗೆಹಾರ : ಶಾಲೆಗಳು ಶುಕ್ರವಾರದಿಂದ ಪುನರಾರಂಭವಾದ ಹಿನ್ನಲೆಯಲ್ಲಿ ಬಣಕಲ್ ಗ್ರಾ.ಪಂ ವ್ಯಾಪ್ತಿಯ ಶಾಲೆಗಳಿಗೆ ಬಣಕಲ್ ಗ್ರಾ.ಪಂ ವತಿಯಿಂದ ಕೊರೊನಾ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಔಷಧಿ ಸಿಂಪಡಿಸಲಾಯಿತು.
ಬಣಕಲ್ ಗ್ರಾ.ಪಂ ವ್ಯಾಪ್ತಿಯ ಹೆಗ್ಗುಡ್ಲು, ಮತ್ತಿಕಟ್ಟೆ, ಗುಡ್ಡಟ್ಟಿ, ಬಣಕಲ್ ಸರ್ಕಾರಿ ಪ್ರಾಥಮಿಕ ಶಾಲೆ, ಬಣಕಲ್ ಶ್ರೀ ವಿದ್ಯಾಭಾರತಿ ಶಾಲೆ, ರಿವರ್ ವ್ಯೂ ಶಾಲೆ, ಬಣಕಲ್ ಪ್ರೌಢಶಾಲೆ, ಬಣಕಲ್ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನ ಆವರಣ ಹಾಗೂ ತರಗತಿಗಳಿಗೆ ಸೋಡಿಯಂ ಹೈಪೋ ಕ್ಲೋರೆಡ್ ದ್ರಾವಣ ಸಿಂಪಡಿಸಲಾಯಿತು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಣಕಲ್ ಗ್ರಾ.ಪಂ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ ಅವರು, ಶಾಲೆಗಳು ಪುನರಾರಂಭವಾಗಿದ್ದು, ಕೊರೊನಾ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ಔಷಧಿ ಸಿಂಪಡಿಸಿ ಸ್ಯಾನಿಟೈಸರ್ಡ್ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಬಣಕಲ್ ಪಿಡಿಓ ಕೃಷ್ಣಪ್ಪ ಅವರು ಇದ್ದರು.










