ಮೂಡಿಗೆರೆ : ಬೈರಾಪುರ ಡಾ.ಬಿ.ಪಿ ಅಮೃತ್ ಪಟೇಲ್‍ಗೆ ಚಿನ್ನದ ಪದಕ.

114
firstsuddi

ಮೂಡಿಗೆರೆ : ಡಾ.ಬಿ.ಪಿ ಅಮೃತ್ ಪಟೇಲ್ ಅವರು ದೆಹಲಿಯ ರಾಜೀವ್ ಗಾಂಧಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಹಾಗೂ ರಿಸರ್ಚ್ ಸೆಂಟರ್‍ ನಲ್ಲಿ ಸೂಪರ್ ಸ್ಪೆಷಾಲಿಟಿ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಇವರು ತಾಲೂಕಿನ ಬೈರಾಪುರ ಗ್ರಾಮದ ಪಟೇಲ್ ಪದ್ಮೇಗೌಡ ಹಾಗೂ ಕಲಾವತಿ ದಂಪತಿ ಪುತ್ರರಾಗಿದ್ದು, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ.

ದೆಹಲಿಯ All india institute of medical science(AIIMS)ಎಂಡಿ ಪದವಿ ಪಡೆದ ಇವರು ದೆಹಲಿಯ ರಾಜೀವ್ ಗಾಂಧಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಹಾಗೂ ರಿಸರ್ಚ್ ಸೆಂಟರ್‍ ನಲ್ಲಿ ಕ್ಯಾನ್ಸರ್ ವಿಬಾಗದಲ್ಲಿ ಸೂಪರ್ ಸ್ಪೆಷಾಲಿಟಿ ಪದವಿ ಪಡೆದು ಚಿನ್ನದ ಪದಕ ಪಡೆದು ತಾಲೂಕಿಗೆ ಹೆಮ್ಮೆಯ ವೈದ್ಯರಾಗಿದ್ದು, ಮಾಜಿ ಶಾಸಕಿ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಶಾಸಕ ಕುಮಾರಸ್ವಾಮಿ, ಬಿಜೆಪಿ ಮುಖಂಡರಾದ ಹಳೆಕೋಟೆ ಮನೋಜ್, ಜನ್ನಾಪುರ ರಘು, ಪಟ್ಟದೂರು ಕಾರ್ತಿಕ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್, ಕಾಂಗ್ರೆಸ್ ಯುವ ಮುಖಂಡ ನಿಶಾಂತ್ ಪಟೇಲ್ ಸೇರಿದಂತೆ ಬೈರಾಪುರ ಗ್ರಾಮಸ್ಥರು ಡಾ.ಬಿ.ಪಿ ಅಮೃತ್ ಪಟೇಲ್ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.