ಕೊಟ್ಟಿಗೆಹಾರ : ಬಣಕಲ್ ಸುತ್ತಮುತ್ತಲ್ಲಾ ಬೆಳೆ ಹಾನಿ ಪ್ರದೇಶಕ್ಕೆ ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಬೆಳೆ ಹಾನಿ ವೀಕ್ಷಿಸಿದರು.
ಕೊಟ್ಟಿಗೆಹಾರ, ಬಣಕಲ್, ಅತ್ತಿಗೆರೆ, ತರುವೆ, ಬಿನ್ನಡಿ, ಬಣಕಲ್, ಬಡವನದಿಣ್ಣೆ, ಬಕ್ಕಿ ಮತ್ತಿತರ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ಮಾತನಾಡಿದ ಬಣಕಲ್ ಕೃಷಿ ಅಧಿಕಾರಿ ವೆಂಕಟೇಶ್ ಅವರು, ವಿವಿಧ ಗ್ರಾಮಗಳಲ್ಲಿ ಭತ್ತ ಹಾಗೂ ಕಾಫಿ ಬೆಳೆಗೆ ಮಳೆಯಿಂದ ಹಾನಿಯಾಗಿದೆ. ಭತ್ತ ಮಾತ್ರವಲ್ಲದೇ ಅದರ ಹುಲ್ಲು ಕೂಡ ಒದ್ದೆಯಾಗಿ ಉಪಯೋಗಿಸಲು ಯೋಗ್ಯವಿಲ್ಲದಂತಾಗಿದೆ. ಬೆಳೆಹಾನಿಯಾಗಿರುವ ಬಗ್ಗೆ ಸಮೀಕ್ಷೆ ನಡೆಸಿ ವರದಿ ತಯಾರಿಸಿ ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು.
ಕಂದಾಯ ಅಧಿಕಾರಿ ಆನಂದ್ ಅವರು ಮಾತನಾಡಿ ಬೆಳೆ ಹಾನಿಯಾದ ರೈತರು ತಮ್ಮ ಪಹಣಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ನಕಲನ್ನು ಕೃಷಿ ಇಲಾಖೆಗೆ ನೀಡಿ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು ಎಂದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕಿ ಶ್ವೇತಾ, ಲೆಕ್ಕ ಸಹಾಯಕಿ ಶೈಲಜಾ, ಸಿಬ್ಬಂದಿ ಗೋಪಾಲ್, ಗ್ರಾಮ ಲೆಕ್ಕಾಧಿಕಾರಿ ಆನಂದ್, ಗ್ರಾಮ ಸಹಾಯಕ ಅಣ್ಣಪ್ಪ ಇದ್ದರು.