ಮೂಡಿಗೆರೆ : ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತೋತ್ಸವ ಅಂಗವಾಗಿ ಇಂದು ಜಾವಳಿ ಬಿಜೆಪಿ ವತಿಯಿಂದ ಸ್ವಚ್ಚತಾ ಅಭಿಯಾನವನ್ನು ಆಚರಿಸಲಾಯಿತು. ಜಾವಳಿ ವೃತ್ತದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ಪರೀಕ್ಷಿತ್ ಜಾವಳಿ ಅವರು ಇವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲೂ ಅಳವಡಿಸಿಕೊಳ್ಳಬೇಕು. ಇಂತಹ ಮಹಾನ್ ವ್ಯಕ್ತಿಗಳ ಕಾಯಕ ನಿಷ್ಠೆಯನ್ನು ಪ್ರತಿಯೊಬ್ಬರು ಅನುಸರಿಸಿಕೊಂಡು ದೇಶದ ಸುಧಾರಣೆಯಲ್ಲಿ ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶಶಿಧರ್, ಹೋಬಳಿ ಬಿಜೆಪಿ ಅಧ್ಯಕ್ಷ ಮಾರ್ಕಲ್ ವಿಜಯೇಂದ್ರ, ಯುವ ಮುಖಂಡರುಗಳಾದ ಶಶಿ ಕುಮಾರ್, ಕೃಷ್ಣ ಟೈಲರ್, ಸುಮನ್, ಸಂಪತ್, ಯುವ ಮೋರ್ಚಾ ಅಧ್ಯಕ್ಷ ಅಜೀತ್, ನವೀನ್ ಹಾವಳಿ, ಕೃಷ್ಣಮೂರ್ತಿ, ಗ್ರಾ.ಪಂ ಮಾಜಿ ಸದಸ್ಯ ಮಂಜುನಾಥ್, ಚಿದಂಬರಂ, ಅಶೋಕ್, ದೀಕ್ಷಿತ್, ಜೆಸಿಬಿ ರಾಮಣ್ಣ, ಸುನೀಲ್ ಮೇಗೂರು ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಅಂಗವಾಗಿ ಸ್ವಚ್ಚತಾ ಅಭಿಯಾನ…










