ಮೂಡಿಗೆರೆ: ರಾತ್ರೋ ರಾತ್ರಿ ಮೂರು ವೈನ್ ಶಾಪ್, ಮೆಡಿಕಲ್ ಹಾಗೂ ಹಾರ್ಡ್ ವೇರ್ ನಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.ನಗರದ ಕೆ. ಎಂ. ರಸ್ತೆಯಲ್ಲಿರುವ ಎಸ್ ಬಿ ಜಿ ಬಾರ್, ಸುದರ್ಶನ್ ವೈನ್ಸ್, ಚಂದನ ವೈನ್ಸ್ ಶಿಫಾ ಮೆಡಿಕಲ್
ಸೇರಿದಂತೆ ಹಾರ್ಡ್ ವೇರ್ ಗೂ ಖದೀಮರು ಕನ್ನ ಹಾಕಿದ್ದಾರೆ. ಶೇಟರ್ ಬೆಂಡ್ ಮಾಡಿ ಒಂದೇ ರೀತಿ ಕಳ್ಳತನ ಮಾಡಿರುವ ಕಳ್ಳರು ಲಕ್ಷಾಂತರ ರೂಪಾಯಿ ದೋಚಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಇದೇ ಕಳ್ಳರ ತಂಡ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದ ದಿನಸಿ ಅಂಗಡಿಗೂ ಕನ್ನ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ಮುಂದುವರೆಸಿದ್ದಾರೆ.