ಮೂಡಿಗೆರೆ : ಲಘು ಪೋಷಕಾಂಶವನ್ನು ಮಣ್ಣಿಗೆ ಹಾಕುವುದರಿಂದ ಮಣ್ಣಿನ ಫಲವತ್ತತೆ ಮತ್ತು ಅಧಿಕ ಇಳುವರಿಯನ್ನು ಪಡೆಯಬಹುದು : ಗಿರೀಶ್.

246
firstsuddi
ಕಳಸ : ಲಘು ಪೋಷಕಾಂಶವನ್ನು ಮಣ್ಣಿಗೆ ಹಾಕುವುದರಿಂದ ಮಣ್ಣಿನ ಫಲವತ್ತತೆ ಮತ್ತು ಅಧಿಕ ಇಳುವರಿಯನ್ನು ಪಡೆಯಬಹುದು ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಗಿರೀಶ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ಸಂಸೆ ಬಸ್ರಿಕಲ್ ತೋಟವೊಂದರಲ್ಲಿ ಮಣ್ಣು ಪರೀಕ್ಷೆ ಮತ್ತು ಅಡಕೆ ಗಿಡಕ್ಕೆ ತಗುಲಿದ ರೋಗದ ವಿಷಯದ ಕುರಿತು ತರಭೇತಿ ನೀಡಿದ ಅವರು ಮೂರು ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸಬೇಕು ಮಣ್ಣಿನ ಫಲವತ್ತತೆ ಕಾಪಾಡಲು ವರ್ಷಕ್ಕೆ ಪ್ರತೀ ಎಕರೆಗೆ 200 ಕೆ.ಜಿ ಸುಣ್ಣ ಹಾಕಬೇಕು. ಪ್ರಸ್ತುತ ಅಡಕೆ ಮರಕ್ಕೆ ರೋಗಕ್ಕೆ ಕೊನೆ ಕೊಯ್ಯುವ ಸಂದರ್ಭದಲ್ಲಿ ರೋಗ ಬಂದಿರುವ ಗರಿಗಳನ್ನು ಕತ್ತರಿಸಿ ಮತ್ತು ಸಾಮಾಹಿಕವಾಗಿ ತೋಟವನ್ನು ಸ್ವಚ್ಚಗೊಳಿಸಬೇಕು. ಹಾಗೂ ಸಾಮೂಹಿಕವಾಗಿ ರೋಗದ ಹತೋಟಿಗೆ 200 ಲೀ ನೀರಿಗೆ 600 ಗ್ರಾಂ ಕಾರ್ಬೇಂಡಝಿಮ್ ಮತ್ತು ಮ್ಯಾಂಕೋಝೆಬ್ ಮಿಶ್ರಣ 20 ದಿನದ ಅಂತರದಲ್ಲಿ ಎರಡು ಬಾರಿ ಸಿಂಪಡಣೆ ಮಡಿದರೆ ರೋಗ ಹತೋಟಿಗೆ ಬರುತ್ತದೆ ಎಂದು ಮಾಹಿತಿ ನೀಡಿದರು.
ತರಭೇತಿಯಲ್ಲಿ ಮೇಲ್ವಿಚಾರಕ ನಾಗರಾಜ್,ಕೃಷಿ ಮೇಲ್ವಿಚಾರಕ ಹರೀಶ್,ತೋಟದ ಮಾಲಿಕ ಶೇಷಪ್ಪ,ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ.ಕೆ.ಮಹೇಶ್,ಒಕ್ಕೂಟದ ಉಪಾಧ್ಯಕ್ಷ ಸುರೇಶ್,ಸೇವಾಪ್ರತಿನಿಧಿ ಸತೀಶ್ ಇದ್ದರು.