ಮೂಡಿಗೆರೆ : ಸಾಮಾಜಿಕ ಸೇವೆ ಹಾಗೂ ವ್ಯಕ್ತಿತ್ವ ವಿಕಸನವೇ ಜೆಸಿಐ ಸಂಸ್ಥೆಯ ಮೂಲ ಉದ್ದೇಶ : ಸಮತಾ

216
firstsuddi

ಮೂಡಿಗೆರೆ : ಸಾಮಾಜಿಕ ಸೇವೆ ಹಾಗೂ ವ್ಯಕ್ತಿತ್ವ ವಿಕಸನವೇ ಜೆಸಿಐ ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದು ವಲಯಾಧ್ಯಕ್ಷೆ ಸಮತಾ ಮಿಸ್ಕಿತ್ ಹೇಳಿದರು.
ಅವರು ಜಾವಳಿಯ ಕಾಳಿಕಟ್ಟೆಯಲ್ಲಿ ನಡೆದ ಜೆಸಿಐ ಬಾಳೂರು ಸಂಗಮದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜೆಸಿಐ ಯುವಜನತೆಗೆ ಸಮಾಜದಲ್ಲಿ ಸಮರ್ಥ ನಾಯಕತ್ವ ಹೊಣೆಗಾರಿಕೆಗೆ ಪ್ರೇರೇಪಿಸುತ್ತದೆ ಹಾಗೂ ವ್ಯಕ್ತಿಯ ವ್ಯಕ್ತಿತ್ವನ್ನು ರೂಪಿಸುವಲ್ಲಿ ಜೆಸಿಐ ಶ್ರಮಿಸುತ್ತದೆ ಎಂದರು.
ಬಾಳೂರು ಜೆಸಿಐನ ಅಧ್ಯಕ್ಷ ಕೆ.ಟಿ.ಸತೀಶ್ ಮಾತನಾಡಿ, ಜೆಸಿಐನಲ್ಲಿ ಸಿಗುವ ತರಬೇತಿಗಳು ವ್ಯಕ್ತಿಯ ಜೀವನ ಶೈಲಿಯನ್ನೇ ಬದಲಾಯಿಸುತ್ತವೆ. ಯುವ ಜನರು ಜೆಸಿಐಗೆ ಸೇರಿ ಸಾಮಾಜಿಕ ಸೇವೆ ನೀಡುವ ಮೂಲಕ ಸಮಾಜವನ್ನು ಸ್ಥಿರದಾರಿಯಲ್ಲಿ ನಡೆಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸ್ವಾಭಿಮಾನ ಹಾಗೂ ವಿನಮೃತೆಯಿಂದ ಸೇವೆ ಸಲ್ಲಿಸುವ ಮನೋಭಾವನೆಯನ್ನು ಉನ್ನತೀಕರಿಸುತ್ತದೆ ಎಂದರು.
ಜೆಸಿಐನ ನಿಯೋಜಿತ ಅಧ್ಯಕ್ಷ ಎಂ.ಎನ್.ಆದರ್ಶ ಮಾತನಾಡಿ, ಜೆಸಿಐ ನೀಡಿರುವ ಈ ಗೌರವಾನ್ವಿತ ಹುದ್ದೆ ನನಗೆ ಸಂತಸ ತಂದಿದೆ. ಜೆಸಿಐನ ಎಲ್ಲಾ ಪದಾಧಿಕಾರಿಗಳ ಸಹಕಾರದಿಂದ ಮಾತ್ರವೇ ಸಮಾಜದಲ್ಲಿ ಉತ್ತಮ ಕಾರ್ಯ ಮಾಡಲು ಸಾಧ್ಯವಾಗುತ್ತದೆ. ಹಿಂದಿನ ಅಧ್ಯಕ್ಷರಿಗೆ ಎಲ್ಲರೂ ಉತ್ತಮ ಸಹಕಾರ ಹಾಗೂ ಸಮಯೋಚಿತ ಸಲಹೆಗಳನ್ನು ನೀಡುತ್ತಾ ಬಂದಿದ್ದರು. ಸಮಾಜಕ್ಕೆ ಇನ್ನೂ ಉತ್ತಮ ಮಟ್ಟದ ಸೇವೆ ಸಲ್ಲಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ 2020ರ ಜೆಸಿಐ ಸಂಗಮದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಎಂ.ಎನ್.ಆದರ್ಶ್, ಉಪಾಧ್ಯಕ್ಷರಾಗಿ ಎಂ.ಎನ್.ಅಶ್ವಥ್, ರಜಿತ್, ಸುಬ್ರಾಯ, ಸಂದೀಪ್, ಚರಣ್‍ರಾಜ್, ಗಜೇಂದ್ರ,ಸಂತೋಷ್, ಸತೀಶ್ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ಪ್ರಸಾದ್‍ಕುಮಾರ್, ಸ್ಥಾಪಕಾಧ್ಯಕ್ಷ ಶಶಿಧರ್, ಮುಖಂಡ ಎಂ.ವಿ.ಜಗದೀಶ್, ಶಿಕ್ಷಕ ಗುರುಮೂರ್ತಿ, ಜೆಸಿಐನ ಗಜೇಂದ್ರ, ಉಪೇಂದ್ರ, ಸುಧಾಕರ್ ಇದ್ದರು.