ಮೂಡಿಗೆರೆ : ಸಿದ್ಧಾರ್ಥ್ ಅವರು ಲಕ್ಷಾಂತರ ಜನರಿಗೆ ಜೀವನ ಸಾಗಿಸಲು ದಾರಿ ಮಾಡಿಕೊಟ್ಟ ಆದರ್ಶ ವ್ಯಕ್ತಿ : ಶ್ರೀ ವಿನಯ್ ಗುರೂಜಿ.

290
firstsuddi

ಮೂಡಿಗೆರೆ : ಅಂದು ಆಸಿದ್ದಾರ್ಥ ಜಗತ್ತಿಗೆ ಜ್ಞಾನವನ್ನು ನೀಡಿದರೆ ಇಂದು ಈ ಸಿದ್ದಾರ್ಥ ಲಕ್ಷಾಂತರ ಜನರಿಗೆ ಜೀವನ ಸಾಗಿಸಲು ದಾರಿ ಮಾಡಿಕೊಡುವುದರ ಮೂಲಕ ತಮ್ಮ ಜೀವವನ್ನೇ ಕೊಡುವುದರ ಮೂಲಕ ಆದರ್ಶವ್ಯಕ್ತಿಯಾಗಿದ್ದಾರೆ ಎಂದು ಕೊಪ್ಪ ತಾಲ್ಲೂಕಿನ ಸ್ವರ್ಣಪೀಠಿಕಾಪುರದ ದತ್ತಾವದೂತ ಶ್ರೀ ವಿನಯ್ ಗುರೂಜಿ ತಿಳಿಸಿದರು.

ಮೂಡಿಗೆರೆ ತಾಲ್ಲೂಕಿನ ಗೌತುವಳ್ಳಿಯ ಚೇತನಹಳ್ಳಿಯ ಎಸ್ಟೇಟ್‍ಗೆ ಆಗಮಿಸಿದ ಅವರು, ಕಾಫಿಡೇ ಮಾಲೀಕ ದಿ.ಸಿದ್ದಾರ್ಥ ಹೆಗ್ಡೆ ಅವರ ಸಮಾಧಿಯ ಬಳಿ ತಮ್ಮ ಆಶ್ರಮದಲ್ಲಿ ಪೂಜಿಸುತ್ತಿದ್ದ ಬುದ್ದನ ವಿಗ್ರಹವನ್ನು ಚೇತನಹಳ್ಳಿಯಲ್ಲಿ ಪ್ರತಿಷ್ಟಾಪಿಸಿ ಸಿದ್ದಾರ್ಥ ಹೆಗ್ಡೆ ಅವರ ತಾಯಿ ವಾಸಂತಿ ಗಂಗಯ್ಯ ಹೆಗ್ಡೆ ಅವರಿಗೆ ಸಾಂತ್ವಾನ ತಿಳಿಸಿ ನೀವು ಅಪರೂಪದ ಪುತ್ರರತ್ನವನ್ನು ಹೇರವುದರ ಮೂಲಕ ಆ ಪುತ್ರರತ್ನದಿಂದ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದೀರಿ ಎಂದರು. ಅವರ ಮುಂದೆ ನಮ್ಮದೇನು ಇಲ್ಲಾ. ಪ್ರತಿಯೊಬ್ಬರು ಸಿದ್ದಾರ್ಥ ಅವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಹೇಳಿದರು.
ಈ ಸಂದರ್ಭದಲ್ಲಿ ಗೃಹಮಂಡಲಿಯ ಮಾಜಿ ಅಧ್ಯಕ್ಷ ಜಿ.ಹೆಚ್.ಹಾಲಪ್ಪಗೌಡ, ಪ್ರತಿಮಾ ಚಂದ್ರೇಗೌಡ, ಎನ್.ಎನ್.ಪ್ರಸನ್ನಕುಮಾರ್, ಕನ್ನಗೆರೆ ರಾಜೇಂದ್ರಗೌಡ, ಲಕ್ಷ್ಮಣಗೌಡ, ಚಂದ್ರೇಗೌಡ, ಮಹಾತ್ಮ ಗಾಂಧಿ ಟ್ರಸ್ಟಿನ ಬೆಂಗಳೂರು ಶಿವಕುಮಾರ್, ಮಿಥುನ್, ಶಿವರಾಜ್, ರಾಜೇಶ್ ಸೇರಿದಂತೆ ಗೌತುವಳ್ಳಿಯ ಗ್ರಾಮಸ್ಥರು ಭಾಗವಹಿಸಿದ್ದರು.