ಮೈಸೂರಿನಲ್ಲಿ ಒಂದು ಡೆಲ್ಟಾ ಪ್ಲಸ್ ಕೇಸ್ ಪತ್ತೆಯಾಗಿದ್ದು, ಆ ರೋಗಿಯನ್ನು ಪ್ರತ್ಯೇಕವಾಗಿ ಇರಿಸಲಾಗಿದೆ : ಸಚಿವ ಸುಧಾಕರ್.

99
Firstsuddi

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಅರ್ಭಟದ ನಡುವೆಯೂ ಇದೀಗ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದೆ. ಇದರ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಪ್ರಕರಣ 20-30 ಕೇಸ್ ಬಂದಿದೆ. ಇದೀಗ ಮೈಸೂರಿನಲ್ಲಿ ಒಂದು ಕೇಸ್ ಬಂದಿದ್ದು, ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಯಾವುದೇ ರೋಗ ಲಕ್ಷಣ ಕಂಡು ಬಂದಿಲ್ಲ. ಅಲ್ಲದೆ ಅವರಿಂದ ಯಾರಿಗೂ ಸೋಂಕು ಹರಡಿಲ್ಲ. ಈ ವೈರಸ್ ಬಗ್ಗೆ ನಿರಂತರವಾಗಿ ಎಚ್ಚರವಹಿಸಿದ್ದೇವೆ. 6 ಜಿನೋಮ್ ಲ್ಯಾಬ್ ಕೂಡಾ ಪ್ರಾರಂಭ ಮಾಡಲು ತೀರ್ಮಾನ ಮಾಡಲಾಗಿದೆ. ಪ್ರತಿ ಜಿಲ್ಲೆಗಳಲ್ಲೂ ಶೇಕಡಾ 5ರಷ್ಟು ರ್ಯಾಂಡಮ್ ಟೆಸ್ಟ್ ಮಾಡಬೇಕು. ನಮಗೆ ಅನುಮಾನ ಬರುವ ಕಡೆಗಳಲ್ಲೆಲ್ಲಾ ಇನ್ನೂ ಹೆಚ್ಚು ಪರೀಕ್ಷೆಗಳನ್ನು ಮಾಡಲು ಸೂಚನೆ ನೀಡುತ್ತೇವೆ. 45 ದಿನಗಳ ಒಳಗೆ ಎಲ್ಲಾ ಜಿಲ್ಲೆಗಳಿಗೆ ತಜ್ಞರ ಶಿಫಾರಸು ಅನುಷ್ಠಾನ ಮಾಡ್ತೀವಿ. ಡೆಲ್ಟಾ ಪ್ಲಸ್ ವೈರಸ್ ಗೆ ಚಿಕಿತ್ಸೆ ದೊಡ್ಡ ಬದಲಾವಣೆ ಇಲ್ಲ. ಕೆಲ ಔಷಧಿ ಮಾತ್ರ ಬದಲಾವಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.