ಮೈಸೂರು ಜಿಲ್ಲಾಡಳಿತ ಕೋವಿಡ್ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದೆ : ಸಾ.ರಾ.ಮಹೇಶ್ ಆರೋಪ…

92
firstsuddi

ಮೈಸೂರು : ಜಿಲ್ಲಾಡಳಿತ ಕೋವಿಡ್ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದೆ. ಮೇ 1 ರಿಂದ 29 ರವರೆಗೆ ಜಿಲ್ಲೆಯಲ್ಲಿ 969 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ಧಾರೆ. ಆದರೆ ಜಿಲ್ಲಾಡಳಿತ ಕೇವಲ 238 ಜನ ಸಾವನ್ನಪ್ಪಿದ್ದಾರೆ ಎಂದು ಸರ್ಕಾರಕ್ಕೆ ಲೆಕ್ಕ ತೋರಿಸಿದೆ. ಆದ್ರೆ 731 ಸಾವುಗಳ ಲೆಕ್ಕವನ್ನು ನೀಡಿಲ್ಲ. ಈ ಮೂಲಕ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು ವಾಗ್ದಾಳಿ ನಡೆಸಿದರು.

ಜಿಲ್ಲೆಯಲ್ಲಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದ್ದೇನೆ ಎಂದು ಪೋಸ್ ಕೊಡಲು ಈ ರೀತಿ ಲೆಕ್ಕ ಕೊಡುತ್ತಿದ್ದಾರೆ. ಈ ರೀತಿ ತಪ್ಪು ಲೆಕ್ಕ ಕೊಡೋಕೆ ಐಎಎಸ್ ಯಾಕೆ ಬೇಕು?. ಎಸ್ ಎಸ್ ಎಲ್ ಸಿ ಓದಿದವರು ಸಾಕಲ್ಲವೇ? ತಪ್ಪು ಲೆಕ್ಕ ನೀಡಿದರೆ ಸತ್ತ ಕುಟುಂಬಗಳಿಗೆ ಸರ್ಕಾರ ಯಾವುದಾದರೂ ಆರ್ಥಿಕ ಸಹಾಯ ಮಾಡಿದರೆ ಆ ಕುಟುಂಬಗಳಿಗೆ ವಂಚನೆ ಮಾಡಿದಂತಾಗುತ್ತದೆ. ಅಧಿಕಾರಿಗಳು ಏನೇ ಮಾಡಿದರು ನಂಬುತ್ತಾರೆ. ಅದರೆ ರಾಜಕಾರಣಿಗಳು ಸತ್ಯ ಹೇಳಿದರು ನಂಬುವುದಿಲ್ಲ. ಮೈಸೂರು ಜಿಲ್ಲಾಡಳಿತ ಸರ್ಕಾರಕ್ಕೂ ವಂಚನೆ ಮಾಡಿದೆ. ಸರ್ಕಾರವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿ ವಿರುದ್ದ ರಾಜ್ಯಪಾಲರಿಗೆ, ಮಾನವ ಹಕ್ಕು ಆಯೋಗಕ್ಕೆ ದೂರು ನೀಡುತ್ತೇನೆ. ಜೊತೆಗೆ ಸಿಎಂ ಯಡಿಯೂರಪ್ಪನವರಿಗೂ ದಾಖಲಾತಿಗಳನ್ನು ಕಳುಹಿಸಿ ಕೊಡುತ್ತೇನೆ ಎಂದು ತಿಳಿಸಿದ್ದಾರೆ.