ಮಂಗಳೂರು : ಕಳ್ಳನ ಹೊಟ್ಟೆಯಲ್ಲಿತ್ತು 35 ಗ್ರಾಂ ಚಿನ್ನ!

88
firstsddi

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಮೋಹನ್ ಜ್ಯೂವೆಲ್ಲರಿ ಮಳಿಗೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ ಪ್ರಕರಣದ ಆರೋಪಿಯ ಹೊಟ್ಟೆಯಲ್ಲಿ 35 ಗ್ರಾಂ ಚಿನ್ನ ಪತ್ತೆಯಾಗಿದೆ.

ಸುಳ್ಯ ಮತ್ತು ಪುತ್ತೂರಿನಲ್ಲಿ ಚಿನ್ನ ಕಳವು ಪ್ರಕರಣವನ್ನು ಭೇದಿಸಿರುವ ಸುಳ್ಯ ಪೊಲೀಸರು ತಂಗಚ್ಚನ್ ಮತ್ತು ಶಿಬು ಎಂಬವರನ್ನು ಬಂಧಿಸಿದ್ದರು. ಇದರಲ್ಲಿ ಶಿಬು ಎಂಬಾತನಿಗೆ ಮೇ.29ರಂದು ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬಳಿಕ ಆಸ್ಪತ್ರೆಗೆ ದಾಖಲಿಸಿ ಎಕ್ಸರೇ ಮಾಡಿದ ಸಂದರ್ಭದಲ್ಲಿ ಆತನ ಹೊಟ್ಟೆಯಲ್ಲಿ ಚಿನ್ನಾಭರಣ ಇರುವುದು ಕಂಡು ಬಂದಿದೆ. ಇದರಂತೆ ನಿನ್ನೆ ಬೆಳಗ್ಗೆ ವೈದ್ಯರುಗಳು ಕಾರ್ಯಾಚರಣೆ ನಡೆಸಿ ಆರೋಪಿಯ ಹೊಟ್ಟೆಯಿಂದ 35 ಗ್ರಾಂ ಚಿನ್ನಾಭರಣಗಳನ್ನು ಹೊರ ತೆಗೆದಿದ್ದಾರೆ. ಉಂಗುರ, ಓಲೆ, ಸೇರಿದಂತೆ 30 ಕ್ಕೂ ಅಧಿಕ ಆಭರಣಗಳನ್ನು ಹೊರ ತೆಗೆಯಲಾಗಿದೆ.

ಬಂಧನದ ವೇಳೆ ಪೊಲೀಸರಿಂದ ಮರೆಮಾಚುವುದಕ್ಕೆ ಚಿನ್ನವನ್ನು ನುಂಗಿದ್ದ. ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿದಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.