ಮೈಸೂರು ಟೌನ್ & ಕಂಟ್ರಿ ಪ್ಲ್ಯಾನಿಂಗ್ ಜಂಟಿ ನಿರ್ದೇಶಕನ ಮನೆ ಮೇಲೆ ಎಸಿಬಿ ದಾಳಿ…

105
Firstsuddi

ಉಡುಪಿ : ಭ್ರಷ್ಟ ಅಧಿಕಾರಿಗಳಿಗೆ ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಉಡುಪಿಯ ಅಧಿಕಾರಿಯೋರ್ವರ ಮನೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

 ಇಂದು ಮಂಗಳೂರು ವಿಭಾಗದ ಎಸಿಬಿ ಅಧಿಕಾರಿಗಳ ತಂಡ ಉಡುಪಿಯ ಹೊರವಲಯದ ಪುತ್ತೂರು ಎಂಬಲ್ಲಿರುವ ಮೈಸೂರು ಟೌನ್ & ಕಂಟ್ರಿ ಪ್ಲ್ಯಾನಿಂಗ್ ಜಂಟಿ ನಿರ್ದೇಶಕ ಸುಬ್ರಹ್ಮಣ್ಯ ಕೆ. ವಡ್ಡರ್ ಮನೆಯ ಮೇಲೆ ದಾಳಿ ನಡೆಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.