ಯಾದಗಿರಿಯಲ್ಲಿ ಹೇಯ ಕೃತ್ಯ ; ಅಣ್ಣನಿಂದಲೇ ತಂಗಿ ಮೇಲೆ ಅತ್ಯಾಚಾರ…

101
firstsuddi

ಯಾದಗಿರಿ : ತಂಗಿ ಮೇಲೆ ಅಣ್ಣನೇ ಅತ್ಯಾಚಾರ ಮಾಡಿರುವ ಘಟನೆ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಂತ್ರಸ್ತೆ ಜಿಲ್ಲೆಯ ತಾಲ್ಲೂಕಿನ ವ್ಯಾಪ್ತಿಯ ನಿವಾಸಿಯಾಗಿದ್ದು, ಅದೇ ಗ್ರಾಮ ನಿವಾಸಿ ಚಿಕ್ಕಪ್ಪನ ಮಗಳ ಮೇಲೆ ಅತ್ಯಾಚಾರ ವ್ಯಸಗಿರುವ ಆರೋಪ ಕೇಳಿಬಂದಿದೆ.

ಅ.4 ರಂದು ಸಂತ್ರಸ್ತೆಯನ್ನು ಸೀತಾಫಲ ಹಣ್ಣು ತರಲು ಹೋಗೋಣ ಎಂದು ಕರೆದುಕೊಂಡು ಬಂದ ಆರೋಪಿ, ಬಳಿಕ ಗೋಗಿ ಪೊಲೀಸ್ ಠಾಣೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ವಿಷಯ ಯಾರಿಗಾದರೂ ತಿಳಿಸಿದ್ರೆ ಜೀವ ಸಹಿತ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ.

ಘಟನೆ ಬಗ್ಗೆ ನಿನ್ನೆ ಶಹಾಪುರ ತಾಲ್ಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ. ಸದ್ಯ ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸೆಕ್ಷನ್ 376(ಅತ್ಯಾಚಾರ) ಮತ್ತು 506(ಕ್ರಿಮಿನಲ್ ಬೆದರಿಕೆ) ಅಡಿ ಕೇಸ್ ದಾಖಲು ಮಾಡಿದ್ದಾರೆ.