ರಾಜೀನಾಮೆಗೂ ಮುನ್ನ ರೈತರಿಗೆ ಹಾಗೂ ಬಡವರಿಗೆ ಉತ್ತಮ ಕೊಡುಗೆ ನೀಡಿದ ಉಸ್ತುವಾರಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ…

325
firstsuddi

ಬೆಂಗಳೂರು : ವಿಶ್ವಾಸ ಮತವನ್ನು ಸಾಬೀತು ಪಡಿಸಲಾಗದೆ ಅಧಿಕಾರ ಕಳೆದುಕೊಂಡ ಉಸ್ತುವಾರಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದರೂ ರೈತರಿಗೆ ಹಾಗೂ ಬಡವರಿಗೆ ಉತ್ತಮವಾದ ಕೊಡುಗೆಯನ್ನು ನೀಡಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವುದಕ್ಕೂ ಮುನ್ನ ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಿದ್ದು, ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಇದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ರೈತರು ಹಾಗೂ ಬಡವರನ್ನು ಸಾಲದಿಂದ ಮುಕ್ತಗೊಳಿಸಲು ಋಣಮುಕ್ತ ಕಾಯ್ದೆಯನ್ನು ಹೊರಡಿಸಿದ್ದು, ಈ ಕಾಯ್ದೆಯಿಂದ ಜುಲೈ 23ಕ್ಕೂ ಮೊದಲು ವಾರ್ಷಿಕ ಆದಾಯ 1ಲಕ್ಷದ 20 ಸಾವಿರಕ್ಕಿಂತ ಕಡಿಮೆ ಇರುವವರು, 2 ಹೆಕ್ಟೇರ್ ಗಿಂತ ಕಡಿಮೆ ಭೂಮಿ ಹೊಂದಿದವರು ಹಾಗೂ ಭೂಮಿ ಇಲ್ಲದವರು ಬ್ಯಾಂಕ್‍ನ್ನು ಹೊರತುಪಡಿಸಿ ಪಡೆದಿರುವ ಯಾವುದೇ ಖಾಸಗಿ ಸಾಲಗಳು ಮನ್ನಾ ಆಗಲಿದೆ. ಈ ಕಾಯ್ದೆ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ. ಇಂದಿನಿಂದ 90ದಿನದೊಳಗೆ ನೋಡಲ್​ ಅಧಿಕಾರಿಗೆ ದಾಖಲೆ ಸಮೇತ ಅಥವಾ ದಾಖಲೆ ಇಲ್ಲದಿದ್ದರೂ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಸಾಲಮನ್ನಾ ಮಾಡಲಾಗುತ್ತದೆ ಎಂದು ತಿಳಿಸಿದರು.