ರಾಜ್ಯದಲ್ಲಿ 400ರ ಗಡಿದಾಟಿದ ಕೊರೊನಾ ಪ್ರಕರಣ-ಇಂದು ಒಂದೇ ದಿನ 18 ಮಂದಿಗೆ ಕೊರೊನಾ ಪಾಸಿಟವ್…

141
firstsuddi

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಲೇ ಇದ್ದು, ಈಗಾ ಮತ್ತೆ 13 ಹೊಸ ಕೊರೊನಾ ಪ್ರಕರಣ ದಾಖಲಾಗಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 408ಕ್ಕೆ ಏರಿಕೆಯಾಗಿದೆ. ಇಂದು ಬೆಳಿಗ್ಗೆ ಕಲಬುರಗಿ ಜಿಲ್ಲೆ ಒಂದರಲ್ಲೇ 5 ಕೊರೊನಾ ಪ್ರಕರಣ ದಾಖಲಾಗಿತ್ತು. ಈಗಾ ವಿಜಯಪುರ ಜಿಲ್ಲೆ ಒಂದರಲ್ಲೆ 11 ಪ್ರಕರಣ ಪತ್ತೆಯಾಗಿದ್ದು, ಬೀದರ್-1, ಗದಗ-1 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.