ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಅವರು 2022-23ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ. 2,65,720 ಕೋಟಿ ರೂಪಾಯಿ ಗಾತ್ರದ ಬಜೆಟ್ ಇದಾಗಿದ್ದು, ಇದರಲ್ಲಿ ಒಟ್ಟು ಸ್ವೀಕೃತಿ 2,61,972 ಕೋಟಿ ರೂ., ರಾಜಸ್ವ ಸ್ವೀಕೃತಿ 1,89,888 ಕೋಟಿ ರೂ., ಸಾರ್ವಜನಿಕ ಸಾಲ 72 ಸಾವಿರ ಕೋಟಿ ರೂ., ಸೇರಿದಂತೆ ಬಂಡವಾಳ ಸ್ವೀಕೃತಿ 72,009 ಕೋಟಿ ರೂಪಾಯಿ ಅಂದಾಜಿಸಲಾಗಿದೆ. ಇನ್ನು ವೆಚ್ಚದ ಕಡೆಗೆ ನೋಡಿದರೆ ಒಟ್ಟು ವೆಚ್ಚ 2,65, 720ಕೋಟಿ ರೂ. ಇದರಲ್ಲಿ ರಾಜಸ್ವ ವೆಚ್ಚ 2,04,587 ಕೋಟಿ, ಬಂಡವಾಳ ವೆಚ್ಚ 46,595 ಕೋಟಿ ರೂ. ಹಾಗೂ ಸಾಲ ಮರುಪಾವತಿಗೆ 14,179 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ವಿವಿಧ ವಲಯಗಳಿಗೆ ಮೀಸಲಾದ ಹಣದ ವಿವರ ಹೀಗಿದೆ:
• ಕೃಷಿ ಮತ್ತು ಪೂರಕ ಚಟುವಟಿಕೆಗಳು – 33,700 ಕೋಟಿ. ರೂ.
• ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ – 68,479 ಕೋಟಿ ರೂ.
• ಆರ್ಥಿಕ ಅಭಿವೃದ್ಧಿಗೆ ಉತ್ತೇಜನ – 55,657 ಕೋಟಿ. ರೂ.
• ಬೆಂಗಳೂರು ಸಮಗ್ರ ಅಭಿವೃದ್ಧಿ – 8,409 ಕೋಟಿ ರೂ.
• ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ – 3,102 ಕೋಟಿ. ರೂ.
• ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ – 56,710 ಕೋಟಿ ರೂ.
• ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ – 43, 188 ಕೋಟಿ ರೂ.
• ಮಕ್ಕಳ ಅಭ್ಯುದಯಕ್ಕೆ – 40, 944 ಕೋಟಿ ರೂ.
• ಎಸ್ಸಿಎಸ್ಪಿ/ಟಿಎಸ್ಪಿಗೆ 28,234 ಕೋಟಿ ರೂ.
• ಆರೋಗ್ಯ, ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಇತರ ಜನಕಲ್ಯಾಣ ಕಾರ್ಯಕ್ರಮಗಳಿಗೆ 6,329 ಕೋಟಿ ರೂ. ಹೆಚ್ಚುವರಿ.










