ಬೆಂಗಳೂರು: ಕಾಂಗ್ರೆಸ್ ಮುಖಂಡ ರಾಮೋಜಿ ಗೌಡಗೆ ಸೇರಿದ ಹಲವು ಸ್ಥಳಗಳಲ್ಲಿ ಐಟಿ ದಾಳಿ ನಡೆದಿದೆ.
ಬಿಎಸ್ಆರ್ ಡೆವಲಪರ್ಸ್ ಹಾಗೂ ಟುಟೋರಿಯಲ್ ಕಚೇರಿಗಳ ಮೇಲೆ 15 ಜನ ಅಧಿಕಾರಿಗಳ ತಂಡ ಬೆಳಗ್ಗೆ 9 ಗಂಟೆಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ನಗರದ ಹೆಚ್ಎಸ್ಆರ್ ಲೇಔಟ್ ನಲ್ಲಿರುವ ನೆಕ್ಸ್ಪ್ಲೇಸ್ ಇನ್ಫೋ ಪ್ರೈ.ಲಿ ಕಚೇರಿಯ ಮೇಲೂ ದಾಳಿ ನಡೆದಿದ್ದು ಶೋಧ ಕಾರ್ಯ ನಡೆಯುತ್ತಿದೆ.
ರಿಯಲ್ ಎಸ್ಟೇಟ್ ಉದ್ಯಮಿ, ರಾಜಕಾರಣಿಯಾಗಿರುವ ರಾಮೋಜಿ ಗೌಡ ಈ ಹಿಂದೆ ಪದವೀಧರರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು.










