ರಾಸಲೀಲೆ ಸಿಡಿ ಪ್ರಕರಣ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಎಫ್‍ಐಆರ್ ದಾಖಲು..!

125
Firstsuddi

ಬೆಂಗಳೂರು : ಸಿಡಿ ಲೇಡಿಯ ಪರವಾಗಿ ವಕೀಲ ಜಗದೀಶ್ ಅವರು ನೀಡಿರುವ ದೂರಿನ ಮೇರೆಗೆ ಇದೀಗ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಸರ್ಕಾರಿ ಕೆಲಸ ಕೊಡಿಸುವುದಾಗಿ ನನ್ನನ್ನು ಬಳಸಿಕೊಂಡಿದ್ದಾರೆ. ಅವರು ದೆಹಲಿಯ ಕರ್ನಾಟಕ ಭವನದಲ್ಲಿದ್ದೇನೆಂದು ವಿಡಿಯೋ ಕರೆ ಮಾಡಿ ನಗ್ನಳಾಗಿ ದೇಹದ ಅಂಗಾಂಗ ತೋರಿಸಲು ಹೇಳಿದರು. ಅವರು ಪ್ರಭಾವಿ ಆಗಿದ್ದರಿಂದ ಹೇಳಿದಂತೆ ಕೇಳಿದ್ದೇನೆ. ಅವರ ಅಪಾರ್ಟ್‌ಮೆಂಟಲ್ಲೇ ನನ್ನ ಮೇಲೆ 2 ಬಾರಿ ಲೈಂಗಿಕ ಕ್ರಿಯೆ ಮಾಡಿದ್ದಾರೆ. ನಾನು ದೂರು ನೀಡದಂತೆ ತಡೆಯಲು ಮತ್ತು ಅವರ ಕೈಗೆ ಸಿಕ್ಕರೆ ಕೊಂದುಬಿಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೆಲಸ ಕೊಡಿಸದೇ ಮೋಸ ಮಾಡಿ, ಅಶ್ಲೀಲವಾಗಿ ಬಳಸಿಕೊಂಡು, ನನ್ನ ತಂದೆ-ತಾಯಿಗೂ ಬೆದರಿಕೆ ಹಾಕಿದ್ದಾರೆ. ಎಂದು ಸಿಡಿಯಲ್ಲಿದ್ದ ಯುವತಿ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಜಾರಕಿಹೊಳಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.