ಲಂಚ ಪ್ರಕರಣ : ಪಂಜಾಬ್ ಎಎಪಿ ಶಾಸಕ ಅರೆಸ್ಟ್…

55
firstsuddi

ಚಂಡೀಗಢ : ಪಂಜಾಬ್ ನ ಬಟಿಂಡಾ ಗ್ರಾಮಾಂತರ ಕ್ಷೇತ್ರದ ಎಎಪಿ ಶಾಸಕ ಅಮಿತ್ ರತ್ತನ್ ಕೋಟ್ಫಟ್ಟಾ ಅವರನ್ನು ಲಂಚ ಪ್ರಕರಣದಲ್ಲಿ ವಿಜಿಲೆನ್ಸ್ ಬ್ಯೂರೋ ಪಟಿಯಾಲದಲ್ಲಿ ಬಂಧಿಸಿದೆ.

ಘುದ್ದಾ ಗ್ರಾಮದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಕೋಟ್ಫಟ್ಟಾ ಮತ್ತು ಅವರ ಸಹಾಯಕ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಬಟಿಂಡಾ ನಿವಾಸಿ ಪ್ರೀತ್ಪಾಲ್ ಕುಮಾರ್ ಆರೋಪಿಸಿದ್ದಾರೆ. ಕುಮಾರ್ ನೀಡಿದ ದೂರಿನಲ್ಲಿ ರಶಿಮ್ ಗಾರ್ಗ್ ಅವರನ್ನು ಬಟಿಂಡಾದಲ್ಲಿರುವ ಕೋಟ್ಫಟ್ಟಾ ಅವರ ನಿವಾಸಕ್ಕೆ ಆಹ್ವಾನಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ವಾಯ್ಸ್ ರೆಕಾರ್ಡ್‍ನ್ನು ತಮ್ಮ ದೂರಿನೊಂದಿಗೆ ಸಲ್ಲಿಸಿದ್ದರು. ಸರ್ಕಾರದ ಅತಿಥಿ ಗೃಹದಲ್ಲಿ ಗಾರ್ಗ್ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದರು. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಕೋಟ್ಫಾಟ್ಟಾ ಅವರನ್ನು ಪ್ರಶ್ನಿಸಲಾಗಿತ್ತು.

ಬಂಧನದ ನಂತರ ಕೋಟ್ಫಟ್ಟಾ ಅವರನ್ನು ಬಟಿಂಡಾಗೆ ಕರೆದೊಯ್ಯಲಾಯಿತು. ಅಲ್ಲಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಮತ್ತು ತಪ್ಪಿತಸ್ಥರು ಯಾರಾದರೂ ಶಿಕ್ಷೆಗೆ ಗುರಿಯಾಗುತ್ತಾರೆ. ಲಂಚವನ್ನು ಯಾರಿಂದಲೂ, ಯಾವುದೇ ರೀತಿಯಲ್ಲಿ ಸಹಿಸಲಾಗುವುದಿಲ್ಲ. ಪಂಜಾಬಿನ ಜನರ ನಂಬಿಕೆ, ಪ್ರೀತಿ ಮತ್ತು ನಿರೀಕ್ಷೆಗಳು ನನ್ನ ಸ್ಫೂರ್ತಿಯನ್ನು ಹೆಚ್ಚಿಸುತ್ತವೆ ಎಂದು ಪಂಜಾಬಿಯಲ್ಲಿ ಟ್ವೀಟ್ ಮಾಡಿದ್ದಾರೆ.