ಲಾಲು ಪ್ರಸಾದ್ ಯಾದವ್‍ಗೆ ಕಿಡ್ನಿ ದಾನ ಮಾಡಲು ಮುಂದಾದ ಪುತ್ರಿ ರೋಹಿಣಿ.

97
firstsuddi

ಪಾಟ್ನಾ : ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಪುತ್ರಿ ರೋಹಿಣಿ ಆಚಾರ್ಯ ಕಿಡ್ನಿ ದಾನ ಮಾಡಲು ಮುಂದಾಗಿದ್ದಾರೆ.

ಅಕ್ಟೋಬರ್ ನಲ್ಲಿ ಸಿಂಗಾಪುರಕ್ಕೆ ಭೇಟಿ ಕೊಟ್ಟ ಲಾಲು ಪ್ರಸಾದ್ ಯಾದವ್ ಅವರಿಗೆ, ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ ರೋಹಿಣಿ ಅವರು ಮೂತ್ರಪಿಂಡವನ್ನು ತನ್ನ ತಂದೆಗೆ ದಾನ ಮಾಡಲು ನಿರ್ಧರಿಸಿದ್ದಾರೆ. ತಮ್ಮ ಜೀವವನ್ನು ಉಳಿಸಿಕೊಳ್ಳಲು ಮೊದಲಿಗೆ ರೋಹಿಣಿ ಕಿಡ್ನಿಯನ್ನು ಪಡೆಯಲು ಲಾಲು ಪ್ರಸಾದ್ ಒಪ್ಪಿಕೊಳ್ಳಲಿಲ್ಲ. ಆದರೆ ಆಕೆಯ ಮತ್ತು ಕುಟುಂಬಸ್ಥರ ಒತ್ತಡದ ಮೇರೆಗೆ ಕೊನೆಗೆ ಕಿಡ್ನಿ ಪಡೆಯಲು ಒಪ್ಪಿಕೊಂಡಿದ್ದಾರೆ.

ಹಲವು ವರ್ಷಗಳಿಂದ ಕಿಡ್ನಿ ಸಮಸ್ಯೆಗೆ ದೆಹಲಿ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಪ್ರಸಾದ್ ಗೆ ಎಐಐಎಂಎಸ್ ನ ವೈದ್ಯರು ಕಿಡ್ನಿ ಕಸಿ ಮಾಡಿಸಿಕೊಳ್ಳಲು ಸಲಹೆ ನೀಡಿರಲಿಲ್ಲ. ಲಾಲು ಪ್ರಸಾದ್ ಅವರ ಎರಡನೇ ಪುತ್ರಿಯಾಗಿರುವ ರೋಹಿಣಿ ಅವರು ಸಿಂಗಾಪುರದಲ್ಲಿ ನೆಲೆಸಿದ್ದು, ತಮ್ಮ ತಂದೆಗೆ ಮೂತ್ರಪಿಂಡ ಕಾಯಿಲೆ ಸಮಸ್ಯೆ ಇರುವ ಬಗ್ಗೆ ಬಹಳ ಆತಂಕಕ್ಕೊಳಗಾಗಿದ್ದರು. ನಂತರ ಲಾಲು ಅವರನ್ನು ಸಿಂಗಾಪುರದ ವೈದ್ಯ ತಂಡಕ್ಕೆ ತೋರಿಸಿದ್ದಾರೆ. ಅಲ್ಲಿನ ವೈದ್ಯರು ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ನವೆಂಬರ್ 20 ರಿಂದ 24ರ ಒಳಗೆ ಲಾಲು ಅವರು ಮತ್ತೆ ಸಿಂಗಾಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಈ ಸಮಯದಲ್ಲಿ ಅವರು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ.