ವಾಟರ್ ಟ್ಯಾಂಕರ್ ಹರಿದು ಬೈಕ್ ಸವಾರ ದಾರುಣ ಸಾವು…

81
firstsuddi

ಬೆಂಗಳೂರು : ವಾಟರ್ ಟ್ಯಾಂಕರ್ ಹರಿದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಗರದ ಹೆಚ್ ಎಸ್ ಆರ್ ಲೇಔಟ್ 27ನೇ ಮುಖ್ಯರಸ್ತೆಯಲ್ಲಿ ನಡೆದಿದೆ.

ವಾಟರ್ ಟ್ಯಾಂಕರ್ ಪಕ್ಕದಲ್ಲೇ ಬೈಕ್ ಸವಾರ ಹೋಗುತ್ತಿದ್ದ. ಈ ವೇಳೆ ಟ್ಯಾಂಕರ್ ಚಾಲಕ ದಿಢೀರ್ ಆಗಿ ವಾಹನವನ್ನು ಎಡಕ್ಕೆ ತಿರುಗಿಸಿದ್ದಾನೆ. ಪರಿಣಾಮ, ಬೈಕ್ ಗೆ ಟ್ಯಾಂಕರ್ ಗುದ್ದಿದ್ದು, ಬೈಕ್ ಫುಟ್ಪಾತ್ ನ ಬದಿಗೆ ತಾಗಿದೆ. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗಕ್ಕೆ ಬಿದ್ದ ಬೈಕ್ ಸವಾರನ ತಲೆ ಟ್ಯಾಂಕರ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.