ಬೆಂಗಳೂರು : ವಿಧಾನಸಭೆಯಲ್ಲಿಂದು ಆನ್ ಲೈನ್ ಗ್ಯಾಂಬ್ಲಿಂಗ್, ಬೆಟ್ಟಿಂಗ್ ನಿಷೇಧಿಸುವ ಮಹತ್ವದ ವಿಧೇಯಕ ಮಂಡನೆಯಾಗಿದೆ. ಕರ್ನಾಟಕ ಪೊಲೀಸ್ ತಿದ್ದುಪಡಿ ಮಾಡಲಾಗಿದ್ದು, ಅನ್ ಲೈನ್ ಬೆಟ್ಟಿಂಗ್ ಕುರಿತ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡಿಸಿದರು.
ಗ್ಯಾಂಬ್ಲಿಂಗ್ ಹಾಗೂ ಬೆಟ್ಟಿಂಗ್ ಸೇರಿದಂತೆ ಹಣ ನೀಡಿ ಟೋಕನ್ ಗಳನ್ನು ಬಳಕೆ ಮಾಡಿ ಆಡುವ ಅಥವಾ ಇನ್ನಾವುದೇ ಎಲೆಕ್ಟ್ರಾನಿಕ್ ಸಾಧನದ ಮೂಲಕ ನಡೆಯುವ ಜೂಜು ನಿಷೇಧವಾಗುತ್ತದೆ. ಈ ಆನ್ ಲೈನ್ ಜೂಜಾಟ ನಿಷೇಧ ತಿದ್ದುಪಡಿ ಮಸೂದೆಯಡಿ ಲಾಟರಿ ಮತ್ತು ಕುದುರೆ ರೇಸ್ ಗಳು ಬರುವುದಿಲ್ಲ ಎಂದು ವಿಧೇಯಕದಲ್ಲಿವೆ.
ಆನ್ ಲೈನ್ ಜೂಜು, ಬೆಟ್ಟಿಂಗ್ ಆಡುವವರಿಗೆ 1 ಲಕ್ಷ ದಂಡ, ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಸಹಾಯಮಾಡಿದವರಿಗೆ 6 ತಿಂಗಳು ಜೈಲು, 10 ಸಾವಿರ ದಂಡ ವಿಧಿಸುವ ಬಗ್ಗೆ ಹೊಸ ತಿದ್ದುಪಡಿಯಲ್ಲಿ ಸೇರಿಸಲಾಗಿದೆ.










