ವಿಷ ಸೇವಿಸಿ ಐಎಎಫ್ ಮಾಜಿ ಅಧಿಕಾರಿ, ಪತ್ನಿ ಆತ್ಮಹತ್ಯೆ…

60
firstsuddi

ನವದೆಹಲಿ : ಭಾರತೀಯ ವಾಯುಪಡೆಯ (ಐಎಎಫ್) ಮಾಜಿ ಅಧಿಕಾರಿ ಹಾಗೂ ಅವರ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಅಜಯ್ ಪಾಲ್(37) ಮತ್ತು ಮೋನಿಕಾ(32) ಇಬ್ಬರೂ ದಕ್ಷಿಣ ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಬೇರೆ ಬೇರೆ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಮೋನಿಕಾ ಪಾಲ್ ಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು, ಬಾಯಿಯಲ್ಲಿ ನೊರೆ ಬಂದಿತ್ತು, ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಿ ಅಜಯ್ ಪಾಲ್ ಮೃತಪಟ್ಟಿದ್ದರು. ನಂತರ ಮನೆಗೆ ಮರಳಿದ ಮೋನಿಕಾ ಪಾಲ್ ಮಧ್ಯಾಹ್ನದ ವೇಳೆಗೆ ತಾನೂ ವಿಷ ಸೇವಿಸಿದ್ದಾರೆ.

ಅಜಯ್ ಪಾಲ್ ಆತ್ಮಹತ್ಯೆ ಬಗ್ಗೆ ಪೊಲೀಸರು ಮಾಹಿತಿ ಪಡೆಯಲು ಮನೆಗೆ ಬಂದಾಗ ಯಾರೂ ಇಲ್ಲದನ್ನ ಕಂಡು ಸಂಶಯಗೊಂಡಿದ್ದಾರೆ. ನಂತರ ಬಾಗಿಲು ಒಡೆದು ನೋಡಿದಾಗ ಮೋನಿಕಾ ಪಾಲ್ ಮೃತಪಟ್ಟಿರುವುದು ತಿಳಿದುಬಂದಿದೆ.

ಅಜಯ್ ಪಾಲ್ ಇತ್ತೀಚೆಗಷ್ಟೇ ವಾಯುಸೇನೆ ತೊರೆದಿದ್ದರು. ವರ್ಷದ ಹಿಂದೆ ಇಬ್ಬರು ಮದುವೆಯಾಗಿದ್ದರು. ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.