ವೈಷ್ಣವಿ ದೇವಿಯೇ ಹಾಸನಾಂಬೆ ರೂಪದಲ್ಲಿ ಹಾಸನದಲ್ಲಿ ನೆಲೆಸಿದ್ದಾಳೆ : ಅವದೂತ ವಿನಯ ಗುರೂಜಿ.

300
firstsuddi

ಹಾಸನ : ಹಾಸನಾಂಬೆ ಉತ್ಸವದ ಸಾರ್ವಜನಿಕ ದರ್ಶನಕ್ಕೆ ಇಂದು ಕಡೆ ದಿನವಾಗಿದ್ದು, ದರ್ಶನ ಪಡೆದು ಮಾತನಾಡಿದ ಅವದೂತ ವಿನಯ ಗುರೂಜಿ ಅವರು ವೈಷ್ಣವಿ ದೇವಿ ದರ್ಶನಕ್ಕಾಗಿ ಭಕ್ತರು ಇಲ್ಲಿಂದ ಕಾಶ್ಮೀರಕ್ಕೆ ಹೋಗುತ್ತಾರೆ. ವೈಷ್ಣವಿ ದೇವಿಯೇ ಹಾಸನಾಂಬೆ ರೂಪದಲ್ಲಿ ಹಾಸನದಲ್ಲಿ ನೆಲೆಸಿದ್ದಾಳೆ. ದೇಶಕ್ಕೆ ಒಳಿತಾಗಲಿ, ನೆರೆ ಸಂತ್ರಸ್ಥರ ಪರಿಸ್ಥಿತಿ ಸರಿಹೋಗಲಿ ಎಂದು ಪ್ರಾರ್ಥಿಸಿದ್ದೇನೆ. ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ, ಧರ್ಮ ಪ್ರಜ್ವಲಿಸಲಿ ಎಂದರು.