ಶಿವಕುಮಾರ ಶ್ರೀಗಳ 3ನೇ ವರ್ಷದ ಪುಣ್ಯಸ್ಮರಣೆ : ಸಿದ್ದಲಿಂಗ ಸ್ವಾಮಿಗಳಿಂದ ಇಷ್ಟಲಿಂಗ ಪೂಜೆ…

84
firstsuddi

ತುಮಕೂರು : ಹಿರಿಯ ಯತಿ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿ ಇಂದಿಗೆ ಮೂರು ವರ್ಷಗಳು. ಕೋವಿಡ್ ಮೂರನೇ ಅಲೆ ಹೆಚ್ಚುತ್ತಿರುವ ಹಿನ್ನಲೆ ಸಿದ್ದಗಂಗಾ ಮಠದಲ್ಲಿ ಅತ್ಯಂತ ಸರಳವಾಗಿ ಶ್ರೀಗಳ ಸ್ಮರಣೆ ಮಾಡಲು ಸಿದ್ಧತೆ ನಡೆದಿದೆ.

ಸಿದ್ದಗಂಗ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮಿಗಳಿಂದ ಹಳೇ ಮಠದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ. ಬಳಿಕ ಬೆಳಗ್ಗೆ ಪ್ರಾತಃಕಾಲದಲ್ಲಿ ಶ್ರೀಗಳ ಗದ್ದಿಗೆಗೆ ಅಭಿಷೇಕ, ಪೂಜೆ, ಮಹಾಮಂಗಳಾರತಿ ನಡೆಯಿತು. ಯಾವುದೇ ವೇದಿಕೆ ಕಾರ್ಯಕ್ರಮ, ಉತ್ಸವ, ಮೆರವಣಿಗೆ ಇರೋದಿಲ್ಲ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಇಂದು ಮಠಕ್ಕೆ ಭೇಟಿ ನೀಡಿ, ಗದ್ದುಗೆಯ ದರ್ಶನ ಪಡೆಯಲಿದ್ದಾರೆ. ಇತ್ತ ರಾಜ್ಯ ಸರ್ಕಾರವು ಇಂದು ಸ್ವಾಮೀಜಿಗಳ ಪುಣ್ಯಸ್ಮರಣೆ ಅಂಗವಾಗಿ ದಾಸೋಹ ದಿನ ಆಚರಿಸಲು ನಿರ್ಧರಿಸಿದೆ.