ಶ್ರದ್ಧೆ, ವಿಧೇಯತೆ ಮತ್ತು ಪರಿಶ್ರಮದಿಂದ ಮಾತ್ರ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ: ಡಾ| ಕೆ.ಎಸ್.ಪ್ರಕಾಶ್ ರಾವ್.

76
firstsuddi

ಚಿಕ್ಕಮಗಳೂರು: ಶ್ರದ್ಧೆ, ಶಿಸ್ತು, ವಿನಯ, ವಿಧೇಯತೆ ಮತ್ತು ಪರಿಶ್ರಮದಿಂದ ಮಾತ್ರ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಎಐಟಿ ಎಂಬಿಎ ವಿಭಾಗದ ಪ್ರಾಂಶುಪಾಲ ಡಾ| ಕೆ.ಎಸ್.ಪ್ರಕಾಶ್ ರಾವ್ ಹೇಳಿದರು.

ನಗರದ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸುವ ನಿಟ್ಟಿನಲ್ಲಿ ನಿನ್ನೆ ಏರ್ಪಡಿಸಿದ್ದ ಯಶಸ್ಸಿನತ್ತ ಹೆಜ್ಜೆಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಶಿಸ್ತು ಮತ್ತು ಪರಿಶ್ರಮವಿಲ್ಲದಿದ್ದರೆ ಅವರು ಎಂತಹ ದೊಡ್ಡದೊಡ್ಡ ಕಾಲೇಜುಗಳಿಗೆ ಸೇರಿದರೂ ಉಪಯೋಗವಾಗುವುದಿಲ್ಲ. ಅಲ್ಲಿ ಯಶಸ್ವಿಯಾಗಬೇಕಾದರೆ. ಅಲ್ಲೂ ಸಹ ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಲೇಬೇಕು ಎಂದು ಕಿವಿಮಾತು ಹೇಳಿದರು.

ಶ್ರದ್ಧೆ, ಶಿಸ್ತು, ವಿನಯ, ವಿಧೇಯತೆ ಮತ್ತು ಪರಿಶ್ರಮವಿಲ್ಲದ ವಿದ್ಯಾರ್ಥಿಗಳು ಯಾವುದೇ ಪರೀಕ್ಷೆಗಳಲ್ಲಿ ಅಥವಾ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದ ಅವರು, ವಿದ್ಯಾರ್ಥಿಗಳು ಇದನ್ನು ಅರಿತು ಅವುಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಜೆ.ಜಿ.ಸುರೇಂದ್ರ ವಿದ್ಯಾರ್ಥಿಗಳು ಭಯ, ಹಿಂಜರಿಕೆಯನ್ನು ಬಿಡಬೇಕು. ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎಂದು ಸಲಹೆ ಮಾಡಿದರು.

ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ರಾಘವೇಂದ್ರ, ಕೌಶಿಕ್, ರಾಕೇಶ್ ಹೊಸಮನಿ ಅವರು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ಎಂ.ಪಿ. ದಿವ್ಯಾ, ಡಿ.ಎನ್. ವಿಶೃತ್ ಉಪಸ್ಥಿತರಿದ್ದರು.