ಸಂಕಷ್ಟಕ್ಕೆ ಸಿಲುಕಿದ ಯೆಸ್ ಬ್ಯಾಂಕ್-ಎಟಿಎಂ ಮುಂದೆ ಗ್ರಾಹಕರ ಪರದಾಟ…

188
firstsuddi

ಮುಂಬೈ : ಖಾಸಗಿ ರಂಗದ 5ನೇ ಅತೀ ದೊಡ್ಡ ಯೆಸ್ ಬ್ಯಾಂಕ್‍ನ ಎಲ್ಲಾ ಹಣಕಾಸು ಕಾರ್ಯ ಚಟುವಟಿಕೆಗಳ ಮೇಲೆ ತಡೆ ವಿಧಿಸಲಾಗಿದ್ದು, ಇದರಿಂದ ಗ್ರಾಹಕರು ಕಂಗಾಲಾಗಿದ್ದಾರೆ. ವಸೂಲಾಗದ ಸಾಲದ ಪ್ರಮಾಣದಲ್ಲಿನ ಭಾರಿ ಹೆಚ್ಚಳದಿಂದಾಗಿ ಬ್ಯಾಂಕ್ ಹಣಕಾಸು ಬಿಕ್ಕಟ್ಟಿಗೆ ಸಿಲುಕಿದ್ದು, ಹೀಗಾಗಿ ಆರ್‍ಬಿಐ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಆದೇಶ ಮಾಡಿದೆ. ಅಲ್ಲದೇ ಮುಂದಿನ ಆದೇಶದವರೆಗೂ ಬ್ಯಾಂಕ್ ಗ್ರಾಹಕರು ಗರಿಷ್ಠ 50 ಸಾವಿರ ರೂ ವರೆಗೆ ಹಣವನ್ನು ಡ್ರಾ ಮಾಡುವ ಅವಕಾಶವನ್ನು ನೀಡಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಹಕರು ಎಟಿಎಂ ಬಳಿ ದೌಡಾಯಿಸುತ್ತಿದ್ದು, ಎಟಿಎಂ ಮುಂದೆ ಹಣಕ್ಕಾಗಿ ಪರದಾಡುವಂತಾಗಿದೆ.
ಯೆಸ್ ಬ್ಯಾಂಕ್ ಸಾಲದ ಸುಳಿಗೆ ಸಿಲುಕಿ ತೀವ್ರ ನಷ್ಠವನ್ನು ಅನುಭವಿಸುತ್ತಿದ್ದು, ಯೆಸ್ ಬ್ಯಾಂಕ್ ಷೇರುಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಆರಂಭಿಕ ವಹಿವಾಟಿನಲ್ಲೇ ಶೇ. 12.85 ರಿಂದ ಶೇ. 34 ರಷ್ಟು ಇಳಿಕೆ ಕಂಡಿದೆ. ಅಲ್ಲದೇ ನಿಫ್ಟಿಯಲ್ಲೂ ಕೂಡಾ ಶೇ. 4 ರಿಂದ ಶೇ. 6ರಷ್ಟಕ್ಕೆ ಕುಸಿತ ಕಂಡಿದ್ದು, ಇಂದು ಬೆಳಿಗ್ಗೆ 11:30ರ ವೇಳೆಗೆ ಶೇ. 26.90ರಿಂದ 73.10ರಷ್ಟು ಇಳಿಕೆ ಕಂಡಿದೆ. ಈ ಹಿಂದೆ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದ ಬ್ಯಾಂಕ್ ಇತ್ತೀಚಿನ ದಿನಗಳಲ್ಲಿ ದೊಡ್ಡ ಮೊತ್ತದ ಸಾಲ ಮರುಪಾವತಿಯಾಗದ ಕಾರಣ ಹಣಕಾಸಿನ ಭಿಕ್ಕಟ್ಟಿಗೆ ಸಿಲುಕಿದ್ದು, ಇದರಿಂದ ಹೊಸ ಸಾಲ ನೀಡುವುದರ ಪ್ರಮಾಣವು ಇಳಿಕೆಯಾಗಿತ್ತು ಎಂದು ತಿಳಿದು ಬಂದಿದೆ.