ಸಮಾಜದ ಸ್ವಾಸ್ಥ್ಯ ಕಾಪಾಡಲು ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಅತ್ಯಗತ್ಯ.

16

ಚಿಕ್ಕಮಗಳೂರು ಫೆ.4: ಸಮಾಜದ ಸ್ವಾಸ್ಥ್ಯ ಕಾಪಾಡಲು ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಅತ್ಯಗತ್ಯ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಹೇಳಿದರು. ಬಾಳೆಹೊನ್ನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಕರ್ನಾಟಕ ಜಾನಪದ ಪರಿಷತ್ತಿನ ಎನ್‌ಆರ್‌ಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವಾಸ ಸಂಸ್ಥೆಯ ಮಾನ್ಯತೆ ಪಡೆದ ಹೆಗ್ಗಳಿಕೆ ಹೊಂದಿರುವ ಕರ್ನಾಟಕ ಜಾನಪದ ಪರಿಷತ್ ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಜಿಲ್ಲೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು. ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದಿರುವ ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕಾಗಿದೆ. ಜಾನಪದದಲ್ಲಿ 250ಕ್ಕೂ ಹೆಚ್ಚು ಪ್ರಾಕಾರಗಳಿವೆ. ಜಾನಪದವನ್ನು ಮೈಗೂಡಿಸಿಕೊಂಡಲ್ಲಿ ನಮ್ಮ ಬದುಕು ಭವ್ಯವಾಗುತ್ತದೆ ಎಂದು ಹೇಳಿದರು. ಬಿ ಕಣಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಚಂದ್ರ ಮಾತನಾಡಿ ಎಲ್ಲ ಭಾಷೆಗಳಿಗೂ ಎಲ್ಲಾ ಸಂಸ್ಕೃತಿ ಗಳಿಗೂ ಮೂಲ ದ್ರವ್ಯ ಜಾನಪದವಾಗಿದ್ದು ಅದು ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದು ಹೇಳಿದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞ ಪುರುಷ ಭಟ್ ಮಾತನಾಡಿ, ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಬಗೆಂಬುವಂತೆ, ಭಾರತೀಯ ಸಂಸ್ಕೃತಿ ಉಳಿದು ಬೆಳೆಯಬೇಕೆಂದರೆ ಜಾನಪದ ಸಂಸ್ಕೃತಿ ಅತಿ ಮುಖ್ಯವಾಗಿದೆ, ಎಲ್ಲಾ ಧರ್ಮ ಸಂಸ್ಕೃತಿ ಸಾಹಿತ್ಯದ ತಳಪಾಯ ಜಾನಪದವೇ ಆಗಿದೆ. ಇದನ್ನು ಸಂರಕ್ಷಿಸಲು ಕರ್ನಾಟಕ ಜಾನಪದ ಪರಿಷತ್ತು ರಾಜ್ಯದಲ್ಲೆಲ್ಲಾ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಎಂದುತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ, ಕ ಜಾ ಪ ಎನ್‌ಆರ್‌ಪುರ ತಾಲೂಕು ಅಧ್ಯಕ್ಷ, ಅರಳಿಕೊಪ್ಪ ಸತೀಶ್, ಸಮಾಜದಲ್ಲಿ ಕುಟುಂಬದಲ್ಲಿ ನ್ಯಾಯ, ನೀತಿ, ಧರ್ಮ, ಶಾಂತಿ ನೆಲೆಸಬೇಕಾದರೆ, ಜನಪದರು ಉಳಿಸಿ ಬೆಳೆಸಿದ, ಜನಪದ ಸಾಹಿತ್ಯ ಕಲೆ ಸಂಸ್ಕೃತಿಯನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸಾಹಿತಿ ಕೆ.ಟಿ ವೆಂಕಟೇಶ ಮಾತನಾಡಿ, ಜಾನಪದವೆಂದರೆ ಬರಿ ಹಾಡಲ್ಲ ಇದರಲ್ಲಿ 250ಕ್ಕೂ ಹೆಚ್ಚು ಕಲಾ ಪ್ರಕಾರಗಳಿವೆ. ಅದಲ್ಲದೆ ನೂರಾರು ಜನ ಜಾನಪದ ವಿದ್ವಾಂಸರು ರಚಿಸಿರುವ ಜೀವನ ಪಾಠದ ಗ್ರಂಥ ಭಂಡಾರವೇ ಅಡಗಿದೆ. ಎಂದು ತಿಳಿಸಿದರು. ಎನ್‌ಆರ್‌ಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್, ಕವಯತ್ರಿ ಲತಾ, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ತಮನ್ನಾ ಮುನಾವರ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮಂಜುನಾಥ್, ಶಾಲೆಯ ಮುಖ್ಯ ಶಿಕ್ಷಕ ಕೊಟ್ರೇಶ್ ರವರನ್ನು ಸನ್ಮಾನಿಸಲಾಯಿತು. ಎಸ್‍ಡಿಎಮ್‍ಸಿ ಅಧ್ಯಕ್ಷ ಮಹೇಶ್ ಆಚಾರ್ಯ, ಕಾಂತರಾಜ್, ಚೇತನ್ಯ ವೆಂಕಿ, ಇಬ್ರಾಹಿಂ ಶಾಫಿ, ಉಮೇಶ್, ರಾಜೇಂದ್ರ, ಡಿ. ರವೀಂದ್ರ, ಡಿ. ಕಾರ್ತಿಕ್, ಸಿ.ಪಿ ರಮೇಶ್, ಜಯಪ್ರಕಾಶ್, ಶೇಖರ್, ವಿಶ್ವನಾಥ್, ಸುನಿಲ್ ರಾಜ್ ಭಂಡಾರಿ, ಸುಧಾಕರ್ ಉಪಸ್ಥಿತರಿದ್ದರು.