ಚಿಕ್ಕಮಗಳೂರು ಐಜಿ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರುವಂತೆ ಮನವಿ.

72

ಚಿಕ್ಕಮಗಳೂರು ಫೆ.4: ನಗರದ ಐಜಿ ರಸ್ತೆಯ ಎರಡೂ ಬದಿಗಳಲ್ಲಿ ಪ್ರತಿ ದಿನ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರುವಂತೆ ಶಾಸಕ ಎಚ್.ಡಿ ತಮ್ಮಯ್ಯ ಅವರನ್ನು ಆ ರಸ್ತೆಯ ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ. ಐ ಜಿ ರಸ್ತೆ ಕಟ್ಟಡ ಮಾಲೀಕರು ಮತ್ತು ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಶಾಸಕ ಎಚ್. ಡಿ. ತಮ್ಮಯ್ಯ ಅವರನ್ನು ಸೋಮವಾರ ಭೇಟಿ ಮಾಡಿದ ವ್ಯಾಪಾರಸ್ಥರು ಈ ಸಂಬಂಧ ಮನವಿ ಸಲ್ಲಿಸಿದರು. ಐಜಿ ರಸ್ತೆಯಲ್ಲಿ ಪ್ರಸ್ತುತ ಒಂದೊಂದು ದಿನ ಒಂದೊಂದು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಜಾರಿಯಲ್ಲಿ ಇರುವುದರಿಂದಾಗಿ ತಮ್ಮ ಅಂಗಡಿ ಮುಂಗಟ್ಟುಗಳಲ್ಲಿ ವ್ಯವಹಾರ ನಡೆಯುತ್ತಿಲ್ಲ ಎಂದು ಅಳಲು ತೋಡಿಕೊಂಡರು. ರಸ್ತೆಯಲ್ಲಿ ಜನ ಮತ್ತು ವಾಹನ ಸಂಚಾರ ಅತ್ಯಧಿಕವಾಗಿರುವುದರಿಂದ ವಾಹನಗಳಲ್ಲಿ ಬರುವ ನಾಗರೀಕರು ಎತ್ತರವಾಗಿ ಕಟ್ಟಿರುವ ಡಿವೈಡರ್ ಗಳನ್ನು ದಾಟಿ ಅಂಗಡಿಗಳಿಗೆ ವ್ಯಾಪಾರ ಮಾಡಲು ಬರುತ್ತಿಲ್ಲ ಇದರಿಂದಾಗಿ ಸಾಲ ಸೋಲ ಮಾಡಿ ಬಂಡವಾಳ ಹಾಕಿರುವ ನಾವು ವ್ಯಾಪಾರವಿಲ್ಲದೆ ಪರದಾಡುವಂತಾಗಿದೆ ಎಂದರು. ಎರಡೂ ಬದಿಗಳಲ್ಲಿ ಪ್ರತಿದಿನ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರುವುದರಿಂದ ಎರಡೂ ಬದಿಯ ಅಂಗಡಿಗಳಿಗೆ ವ್ಯಾಪಾರವಾಗುತ್ತದೆ ಎಂದು ತಿಳಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎಲ್ ಮೂರ್ತಿ ಐಜಿ ರಸ್ತೆ ಕಟ್ಟಡ ಮಾಲೀಕರು ಮತ್ತು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ದಯಾನಂದ್ ನಾಯ್ಡು, ಪ್ರಧಾನ ಕಾರ್ಯದರ್ಶಿ ಜಗದೀಶಾಚಾರ್, ವ್ಯಾಪಾರಸ್ಥರಾದ ವಿಕ್ರಂ. ಸಿ. ಮನೂಪ್, ಪಾಶಾ. ಅಕ್ರಂ ಹಾಜರಿದ್ದರು.