ಸಿಎಂ ಯಡಿಯೂರಪ್ಪನವರಿಗೆ ಜ್ವರ, ಸುಸ್ತು : ವಾಸ್ತವ್ಯ ಹೂಡಿರುವ ಖಾಸಗಿ ಹೋಟೆಲ್ ಸುತ್ತ ಸ್ಯಾನಿಟೈಸೇಷನ್…

126
firstsuddi

ಬೆಳಗಾವಿ : ಲೋಕಸಭಾ ಉಪಚುನಾವಣೆ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಪರ ಪ್ರಚಾರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜ್ವರ, ಸುಸ್ತು ಕಂಡುಬಂದಿದೆ. ಸದ್ಯ ಖಾಸಗಿ ಹೊಟೇಲ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ನಿನ್ನೆ ಹಗಲೇ ಮುಖ್ಯಮಂತ್ರಿಗಳಿಗೆ ಜ್ವರ ಕಂಡುಬಂದಿತ್ತು. ಆದರೂ ಮೂಡಲಗಿ, ಗೋಕಾಕ್ ನಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದರು. ಗೋಕಾಕ್ ನಲ್ಲಿ ರೋಡ್ ಶೋನಲ್ಲಿ ಭಾಗವಹಿಸಿ ಮತ ಪ್ರಚಾರ ಮಾಡಿದ್ದರಿಂದ ಮತ್ತಷ್ಟು ಜ್ವರ, ಸುಸ್ತು ಕಂಡುಬಂದಿದ್ದು, ವಿಶ್ರಾಂತಿ ಪಡೆಯಲು ತಾವು ಉಳಿದುಕೊಂಡಿದ್ದ ಹೊಟೇಲ್ ಗೆ ಆಗಮಿಸಿದ್ದಾರೆ. ಸಿಎಂ ತಂಗಿರುವ ನಗರದ ಕೊಲ್ಲಾಪುರ ಸರ್ಕಲ್ ನಲ್ಲಿರುವ ಖಾಸಗಿ ಹೋಟೆಲ್ ನಲ್ಲೇ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಇಂದು ಕೂಡ ಸಿಎಂ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಸದ್ಯ ಮುಖ್ಯಮಂತ್ರಿಗಳು ವಾಸ್ತವ್ಯ ಹೂಡಿರುವ ಹೋಟೆಲ್ ಸುತ್ತ ಮುತ್ತ ಸ್ಯಾನಿಟೈಸ್ ಮಾಡಲಾಗಿದ್ದು, ಮುಂಜಾಗ್ರತೆ ವಹಿಸಲಾಗುತ್ತಿದೆ.