ಸಿದ್ದರಾಮಯ್ಯ ಅವರು ಸಾವರ್ಕರ್ ಅವರ ಆತ್ಮಾಹುತಿ ಪುಸ್ತಕವನ್ನು ಓದಿ ಅವರು ಯಾಕೆ ಅಭಿನವ ಭಾರತ ಸಂಘಟನೆ ಕಟ್ಟಿದರು ಎಂದು ತಿಳಿದುಕೊಳ್ಳಲಿ : ಸಿ.ಟಿ ರವಿ.

314
firstsuddi

ಧಾರವಾಡ : ಸಿದ್ದರಾಮಯ್ಯ ಅವರಿಗೆ ಸಾವರ್ಕರ್ ಅವರ ಪುಸ್ತಕವನ್ನು ತಲುಪಿಸಲು ಸಾಧ್ಯವಾಗಿಲ್ಲ, ಹೀಗಾಗಿ ನಾನೇ ಖುದ್ದಾಗಿ ಭೇಟಿ ಮಾಡಿ ಪುಸ್ತಕವನ್ನು ನೀಡುತ್ತೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ ರವಿ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರಿಗೆ ಸಾವರ್ಕರ್ ಅವರ ಪುಸ್ತಕವನ್ನು ತಲುಪಿಸುತ್ತೇನೆ ಎಂದು ಹೇಳಿದ್ದೆ. ಆದರೆ ಕೆಲಸದ ಒತ್ತಡ ಇದ್ದ ಕಾರಣ ಪುಸ್ತಕವನ್ನು ತಲುಪಿಸಲು ಸಾಧ್ಯವಾಗಿಲ್ಲ. ಶೀಘ್ರವೇ ಸಿದ್ದರಾಮಯ್ಯ ಅವರನ್ನು ನಾನೇ ಖುದ್ದಾಗಿ ಭೇಟಿ ಮಾಡಿ ಪುಸ್ತಕವನ್ನು ನೀಡುತ್ತೇನೆ. ಸಿದ್ದರಾಮಯ್ಯ ಅವರು ಸಾವರ್ಕರ್ ಅವರ ಆತ್ಮಾಹುತಿ ಪುಸ್ತಕವನ್ನು ಓದಿ ಅವರು ಯಾಕೆ ಅಭಿನವ ಭಾರತ ಸಂಘಟನೆ ಕಟ್ಟಿದರು ಎಂದು ತಿಳಿದುಕೊಳ್ಳಲಿ. ಅಧಿಕಾರ ಹಿಡಿಯುತ್ತಿದ್ದ ಕಾಲದಲ್ಲೇ ಸಾವರ್ಕರ್ ಅವರು ತಮ್ಮ ಕುಟುಂಬನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅರ್ಪಿಸಿದರು. ಅವರ ಬಗ್ಗೆ ಸತ್ಯ ಸಂಗತಿ ತಿಳಿದರೆ ಸಾವರ್ಕರ್ ಅವರಿಗೆ ಅಪಮಾನ ಮಾಡುವ ಕೆಲಸವಾಗುವುದಿಲ್ಲ. ಸಾವರ್ಕರ್ ಅವರ ಬಗ್ಗೆ ಸತ್ಯ ಸಂಗತಿ ತಿಳಿದರೆ ಭಾರತ ಮಾತೆಗೆ ಅವಮಾನ ಮಾಡುವ ಕೆಲಸ ಕಾಂಗ್ರೆಸ್ ಮಾಡುವುದಿಲ್ಲ. ನಾಥೂರಾಮ್ ಗೋಡ್ಸೆ ಗಾಂಧಿ ದೇಹಕ್ಕೆ ಮಾತ್ರ ಗುಂಡು ಹಾಕಿದ. ಆದರೆ ಮಹಾತ್ಮ ಗಾಂಧಿ ತತ್ವವನ್ನು ಜನಮಾನಸದಿಂದ ದೂರ ಮಾಡಿದವರು ಯಾರು ಎಂದು ಚರ್ಚೆಯಾಗಬೇಕಿದೆ. ನಾವು ಗಾಂಧೀಜಿಯ ಪಕ್ಷದವರು ಎಂದು ಹೇಳುತ್ತಿದ್ದಾರೆ. ಆದರೆ ನಿಜವಾಗಿಯೂ ಇವರು ಗಾಂಧೀಜಿ ತತ್ವದ ವಾರಸುದಾರರಾ? ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ ಅವರು, ಸೋಲುತ್ತೇವೆ ಎಂದು ತಿಳಿದು ಮುಂಚಿತವಾಗಿಯೇ ಇವಿಎಂ ಮೇಲೆ ಬೆರಳು ಮಾಡುತ್ತಿದ್ದಾರೆ. ಅವರು ಗೆದ್ದರೆ ಜನಾದೇಷ ಬಿಜೆಪಿಯವರು ಗೆದ್ದರೆ ಇವಿಯಂ ದೋಷ ಎನ್ನುತ್ತಾರೆ. ಹಿಂದೆ ಗಾಂಧೀಜಿ ಕಾಂಗ್ರೆಸ್ ವಿಸರ್ಜನೆ ಮಾಡಿ ಎಂದು ಹೇಳಿದ್ದರು. ಅದನ್ನು ಈಗ ಜನರೇ ಮಾಡುತ್ತಿದ್ದಾರೆ ಎಂದರು.