ಸ್ಪೈ ಕ್ಯಾಮರಾದಿಂದ ನಗ್ನ ಚಿತ್ರ ಸೆರೆ ಹಿಡಿದು ಬ್ಲಾಕ್ ಮೇಲ್ – ಆರೋಪಿಯ ಬಂಧನ…

77
firstsuddi

ಬೆಂಗಳೂರು : ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ನಗ್ನ ಚಿತ್ರ ಸೆರೆ ಹಿಡಿಯುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಟಿ.ನರಸೀಪುರ ಮೂಲದ ಮಹೇಶ್ ಬಂಧಿತ ಆರೋಪಿ. ಪರಿಚಯಸ್ಥ ಮಹಿಳೆಯ ಮನೆಯ ಕೊಠಡಿಯಲ್ಲಿ ಸ್ಪೈ ಕ್ಯಾಮೆರಾ ಇರುವ ಚಾರ್ಜರ್ ಅಳವಡಿಸುತ್ತಿದ್ದನು. ಈ ಮೂಲಕ ನಗ್ನ ಚಿತ್ರ ಸೆರೆ ಹಿಡಿದುಕೊಂಡು ನಕಲಿ ಇನ್ ಸ್ಟಾಗ್ರಾಮ್ ಮೂಲಕ ಮಹಿಳೆಗೆ ಮೆಸೇಜ್ ಮಾಡುತ್ತಿದ್ದನು. ನಗ್ನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು.

ಮಹಿಳೆ ಆರೋಪಿಯ ಅಕೌಂಟ್ ಬ್ಲಾಕ್ ಮಾಡಿದ್ರೂ, ಮತ್ತೊಂದು ನಕಲಿ ಅಕೌಂಟ್ ನಿಂದ ಮತ್ತೊಮ್ಮೆ ವಿಡಿಯೋ ಕಳಿಸಿ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದನು. ಮಹಿಳೆ ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ.