ಸ್ವಯಂ ಘೋಷಿತ ದೇವಮಾನವ ನಿತ್ಯಾನಂದಾ ಸ್ವಾಮೀಜಿ ವಿರುದ್ಧ ಬ್ಲೂ ಕಾರ್ನರ್ ನೊಟೀಸ್ ಜಾರಿ…

568
firstsuddi

ನವದೆಹಲಿ : ಸ್ವಯಂ ಘೋಷಿತ ದೇವಮಾನವ ನಿತ್ಯಾನಂದಾ ಸ್ವಾಮೀಜಿ ವಿರುದ್ಧ ಇಂಟರ್ ಪೋಲ್ ಬ್ಲೂ ಕಾರ್ನರ್ ನೊಟೀಸ್ ಜಾರಿ ಮಾಡಿದೆ. ಅಹಮದಾಬಾದ್‍ನಲ್ಲಿರುವ ನಿತ್ಯಾನಂದಾ ಸ್ವಾಮೀಜಿ ಆಶ್ರಮದಿಂದ ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದರಿಂದ ಗುಜರಾತ್ ಪೊಲೀಸರು ನಿತ್ಯಾನಂದಾ ಸ್ವಾಮೀಜಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಅಲ್ಲದೇ ತನ್ನ ಆಶ್ರಮವನ್ನು ನಡೆಸಲು ಅನುಯಾಯಿಗಳಿಂದ ದೇಣಿಗೆಯನ್ನು ಸಂಗ್ರಹಿಸಲು ಮಕ್ಕಳನ್ನು ಅಪಹರಿಸಿದ ಆರೋಪ ಕೂಡಾ ನಿತ್ಯಾನಂದಾ ಸ್ವಾಮೀಜಿ ಮೇಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ನಿತ್ಯಾನಂದಾ ಸ್ವಾಮೀಜಿ ವಿರುದ್ಧ ಬ್ಲೂ ಕಾರ್ನರ್ ನೊಟೀಸ್ ಜಾರಿ ಮಾಡುವಂತೆ ಮನವಿ ಮಾಡಿದ್ದರು. ಪೊಲೀಸರ ಮನವಿಯಂತೆ ಈಗಾ ಇಂಟರ್ ಪೋಲ್ ನಿತ್ಯಾನಂದ ಸ್ವಾಮೀಜಿಗೆ ಬ್ಲೂಕಾರ್ನರ್ ನೊಟೀಸ್ ಜಾರಿ ಮಾಡಿದೆ.