ಹಾಡಹಗಲೇ ರೌಡಿಶೀಟರ್ ಹತ್ಯೆಗೆ ಸ್ಕೆಚ್ – ಸಿನಿಮೀಯ ರೀತಿಯಲ್ಲಿ ಪಾರಾದ ಜೆಸಿಬಿ ನಾರಾಯಣ.

44
firstsuddi

ಬೆಂಗಳೂರು : ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ನಟೋರಿಯಸ್ ರೌಡಿಶೀಟರ್ ಜೆಸಿಬಿ ನಾರಾಯಣ ಹತ್ಯೆಗೆ ಸ್ಕೆಚ್ ಹಾಕಲಾಗಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ನಗರದ ಹುಳಿಮಾವು ಡಿಎಲ್ಎಫ್ ರಸ್ತೆಯಲ್ಲಿ ಜೆಸಿಬಿ ನಾರಾಯಣ ಬರುವ ಮಾಹಿತಿ ಅರಿತ ದುಷ್ಕರ್ಮಿಗಳು ಹಾಡಹಗಲೇ ಮಾರಕಾಸ್ತ್ರಗಳನ್ನು ಹಿಡಿದು ಹೊಂಚು ಹಾಕಿ ಕಾಯುತ್ತಿದ್ದರು. ಜೆಸಿಬಿ ನಾರಾಯಣನ ಕಾರು ಬರುತ್ತಿದ್ದಂತೆ ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಜೆಸಿಬಿ ನಾರಾಯಣ ಸಿನಿಮೀಯ ರೀತಿಯಲ್ಲಿ ಕಾರು ರಿವರ್ಸ್ ತೆಗೆದುಕೊಂಡು ಎಸ್ಪೇಪ್ ಆಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆ ಸಂಬಂಧ ಬೇಗೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.