ಹಾಸನ : ಕರ್ನಾಟಕ ಸರ್ಕಾರ ಏನಾದರೂ ಪಾಪರ್ ಚೀಟಿ ತೆಗೆದುಕೊಂಡಿದೆಯಾ? ಅನ್ನೋದನ್ನಾದರೂ ಹೇಳಲಿ : ಹೆಚ್.ಡಿ. ರೇವಣ್ಣ.

340

ಹಾಸನ : ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು, ಕರ್ನಾಟಕ ಸರ್ಕಾರ ಏನಾದರೂ ಪಾಪರ್ ಚೀಟಿ ತೆಗೆದುಕೊಂಡಿದ್ದೀಯಾ ಅನ್ನೋದನ್ನಾದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಲಿ. ಸರ್ಕಾರ ದಿವಾಳಿಯಾಗಿದೆಯಾ ಘೋಷಣೆ ಮಾಡಲಿ. ಲಕ್ಷಾಂತರ ನೆರೆ ಸಂತ್ರಸ್ಥರಿಗೆ ಪರಿಹಾರ ನೀಡುತ್ತಿಲ್ಲ. ಅವರೆಲ್ಲಾ ಬೀದಿಗೆ ಬಿದ್ದಿದ್ದಾರೆ ಎಂದು ಕಿಡಿಕಾರಿದರು. ಕೂಡಲೇ ವಿಧಾನಸಭಾ ಅಧಿವೇಶನ ಕರೆಯಲಿ ನೆರೆ ಹಾನಿ ಬಗ್ಗೆ ಸಮಗ್ರ ಚರ್ಚೆ ಮಾಡಿ ಎಂದು ಆಗ್ರಹಿಸಿದ ಇವರು, ದಂಧೆಯಾದರೂ ಮಾಡಿ, ಏನಾದರೂ ಮಾಡಿ ಮೊದಲು ಜನರಿಗೆ ನೆರವಾಗಿ ಕರ್ನಾಟಕದಲ್ಲಿ 25 ಸೀಟು ಗೆಲ್ಲೋಕೆ ಸುಳ್ಳು ಹೇಳಿದ್ರಿ. ಗೆದ್ದ ಮೇಲೆ ಏಕೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಬೇಡ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸುಳ್ಳು ಹೇಳುವುದೇ ಮೊದಲ ಅಭ್ಯಾಸ. ಒಂದು ಸಮಾಜ ಮುಗಿಸಬೇಕೆಂದು ಯತ್ನ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.