ಬೆಂಗಳೂರು : ಮೆಜೆಸ್ಟಿಕ್ ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ವಿಕಲಚೇತನ ವ್ಯಕ್ತಿವೋರ್ವ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಮೃತನನ್ನು ಆನೇಕಲ್ ನ ಚಿಕ್ಕನಹಳ್ಳಿಯ ಚೆನ್ನಪ್ಪ ಎಂದು ಗುರುತಿಸಲಾಗಿದೆ.
ಜಿಗಣಿಯಿಂದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದ 77 ವರ್ಷದ ಅಂಗವಿಕರಾಗಿದ್ದ ಚೆನ್ನಪ್ಪ ಎಂಬ ವೃದ್ಧ ಟೀ ಕುಡಿಯುತ್ತ ಕುಳಿತ್ತಿದ್ದರು. ಕೆಲ ಹೊತ್ತಿನ ಬಳಿಕ ಚೆನ್ನಪ್ಪ ಹೃದಯಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಮೃತನ ವ್ಯಕ್ತಿಯ ಅಳಿಯನಿಗೆ ಕರೆ ಮಾಡಿ, ವಿಷಯ ತಿಳಿಸಿದ್ದಾರೆ. ಕೋವಿಡ್ ಟೆಸ್ಟ್ ಬಳಿಕ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ.










