ಹೃದಯಾಘಾತದಿಂದ ಮಹಿಳಾ ಸಂಚಾರಿ ಪೊಲೀಸ್ ಸಾವು…

87
firstsuddi

ಬೆಂಗಳೂರು: ನಗರದ ಕೆಂಗೇರಿ ಸಂಚಾರಿ ಠಾಣೆಯ ಮಹಿಳಾ ಕಾನ್ಸ್​ಟೇಬಲ್ ನಿನ್ನೆ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ನಗರದ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಚಾರಿ ಮಹಿಳಾ ಪೊಲೀಸ್ ಪ್ರಿಯಾಂಕಾ ಹೃದಯಾಘಾತದಿಂದ ಸಾವನ್ನಪ್ಪಿರುವ ಮಹಿಳೆಯಾಗಿದ್ದಾರೆ. ಕಾನ್ಸ್​ಟೇಬಲ್ ಪ್ರಿಯಾಂಕಾ ಅವರಿಗೆ 2018ರಲ್ಲಿ ಮದುವೆಯಾಗಿತ್ತು. ಆದರೆ, ದುರಾದೃಷ್ಟ ಎಂಬಂತೆ ಜಗತ್ತನ್ನೇ ಕಾಡಿದ ಕೋವಿಡ್ ಮಹಾಮಾರಿಗೆ ಪ್ರಿಯಾಂಕಾ ಅವರ ಪತಿ 2021ರಲ್ಲಿ ಸಾವನ್ನಪ್ಪಿದ್ದರು. ಇದರಲ್ಲಿಯೂ ಒಂದು ಮನಕಲಕುವ ವಿಚಾರವೆಂದರೆ ಆಗ ಇವರು ಗರ್ಭಿಣಿಯಾಗಿದ್ದರು.

ಇನ್ನು ಕೋವಿಡ್‌ನಿಂದ ಗಂಡನನ್ನು ಕಳೆದುಕೊಂಡರೂ ದೃತಿಗೆಡದೇ ತನ್ನ ಸಂಚಾರಿ ಪೊಲೀಸ್ ಕರ್ತವ್ಯವನ್ನು ಮುಂದುವರೆಸಿಕೊಂಡು ಮಗುವಿಗೆ ಜನ್ಮ ನೀಡಿದ್ದರು. ಇನ್ನು ಹುಟ್ಟುತ್ತಲೇ ತಂದೆ ಇಲ್ಲದೇ ಜನಿಸಿದ್ದ ಮಗು, ಈಗ ಒಂದು ವರ್ಷದಲ್ಲೇ ಜನ್ಮ ನೀಡಿದ ತಾಯಿಯನ್ನೂ ಕಳೆದುಕೊಂಡು ಅನಾಥವಾಗಿದೆ.