ಅಂತರ್ಜಾಲವನ್ನು ದೇಶಕ್ಕೆ ಪರಿಚಯಿಸಿದ ರಾಜೀವ್ ಗಾಂಧಿಯನ್ನು ಅವಮಾನಿಸುವ ಕೆಲಸ ಬಿಜೆಪಿ ನಡೆಸುತ್ತಿದೆ – ಮಿಥುನ್ ರೈ…

220
firstsuddi

ಮಂಗಳೂರು: ಅಂತರ್ಜಾಲವನ್ನು ದೇಶಕ್ಕೆ ಪರಿಚಯಿಸಿದ ರಾಜೀವ್ ಗಾಂಧಿಯನ್ನು ಅವಮಾನಿಸುವ ಕೆಲಸ ಬಿಜೆಪಿ ನಡೆಸುತ್ತಿದೆ ಎಂದು ದಕ ಜಿಲ್ಲಾ ಲೋಕ ಸಭಾ ಅಭ್ಯರ್ಥಿ ಮಿಥುನ್ ರೈ ಹೇಳಿದರು. ಅವರು ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿಯವರ ಪುಣ್ಯತಿಥಿಯಲ್ಲಿ ಭಾಗವಹಿಸಿ ಮಾತನಾಡಿದರು.

ರಾಜೀವ್ ಗಾಂಧಿಯವರ 28 ವರ್ಷಗಳ ಹಿಂದೆ ದೇಶವನ್ನು ಅಗಲಿದ್ದು ಇದು ಕೇವಲ ಕಾಂಗ್ರೆಸ್ ಕುಟುಂಬಕ್ಕೆ ಆದ ನಷ್ಟವಲ್ಲ ಬದಲಾಗಿ ಇಡೀ ದೇಶಕ್ಕೆ ಉಂಟಾದ ನಷ್ಟವಾಗಿದೆ. ರಾಜೀವ್ ಗಾಂಧಿ ಒಂದು ವೇಳೆ ಬದುಕಿದ್ದರೆ ಈ ದೇಶದ ವೇಗ 10 ವರ್ಷ ಹಿಂದಕ್ಕೆ ಹೋಗಲು ಕಾರಣವಾಗುತ್ತಿರಲಿಲ್ಲ. ಭಾರತ ದೇಶ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ತಲುಪಿದ್ದರೆ ಅದಕ್ಕೆ ರಾಜೀವ್ ಗಾಂಧಿಯ ಕೊಡುಗೆ ಅನನ್ಯವಾಗಿದೆ. ರಾಜೀವ್ ಗಾಂಧಿಯವರ ಹತ್ಯೆ ದೇಶದ ಯುವಕರಿಗೆ ತುಂಬಲಾರದ ನಷ್ಟವಾಗಿದೆ.

18 ವರ್ಷ ತುಂಬಿದ ಯುವಕರಿಗೆ ಮತದಾನದ ಹಕ್ಕನ್ನು ಪರಿಚಯಿಸುವುದರ ಮೂಲದ ಈ ದೇಶದ ಯುವಜನರಿಗೆ ಆಶಾಕಿರಣವಾಗಿ ಮೂಡಿ ಬಂದವರು ರಾಜೀವ್ ಗಾಂಧಿ. ದೇಶಕ್ಕೆ ಟೆಲಿಫೋನ್, ಇಂಟರ್ ನೆಟ್ಟ ಸಾಮಾಜಿಕ ಜಾಲ ತಾಣಗಳ ಮೂಲಕ ಡಿಜಿಟಲ್ ಇಂಡಿಯಾದ ಕಲ್ಪನೆಯನ್ನು ಅಂದೇ ದೇಶಕ್ಕೆ ಪರಿಚಯಿಸಿದವರು ರಾಜೀವ್ ಗಾಂಧಿ. ಯುವಕರಿಗೆ ದೇಶದಲ್ಲಿ ಅವಕಾಶ ನೀಡಬೇಕು ಅವರೂ ಕೂಡ ದೇಶದ ಚುಕ್ಕಾಣಿ ಹಿಡಿಯಬೇಕು ಎನ್ನುವ ಆಲೋಚನೆಗೆ ನೀರೆರೆದು ಪೋಷಿಸಿ ಧೀಮಂತ ವ್ಯಕ್ತಿ ರಾಜೀವ್ ಗಾಂಧಿ.

ಇಷ್ಟೆಲ್ಲಾ ಅಭಿವೃದ್ಧಿ ಪರ ಚಿಂತನೆ ಇಟ್ಟುಕೊಂಡು ಕೆಲಸ ಮಾಡಿದ ವ್ಯಕ್ತಿಯನ್ನು ದೇಶದ್ರೋಹಿ ಎನ್ನುವ ರೀತಿಯಲ್ಲಿ ಟ್ವೀಟ್ ಮಾಡಿದ ನಮ್ಮ ಜಿಲ್ಲೆಯ ಸಂಸದರ ನಡೆ ನಿಜಕ್ಕೂ ಖಂಡನಾರ್ಹವಾಗಿದೆ. ಸಂಸದರಿಗೆ ವೈಯುಕ್ತಿವಾಗಿ ಟ್ವೀಟ್ ಮಾಡುವಷ್ಟು ವಿದ್ಯಾಭ್ಯಾಸ ಇಲ್ಲದೆ ಇದ್ದರೂ ಕೂಡ ಯಾರದೋ ಮುಖಾಂತರ ಇದನ್ನು ಅವರು ಮಾಡಿದ್ದಾರೆ ಆದರೆ ಅವರಿಗೆ ಸಾಮಾಜಿಕ ಜಾಲತಾಣದ ಪರಿಚಯ ಮಾಡಿದ್ದು ಮಾತ್ರ ರಾಜೀವ್ ಗಾಂಧಿ ಎನ್ನುವುದುನ್ನು ಸಂಸದರು ಮರೆತಿದ್ದಾರೆ. ಈ ಮೂಲಕ ಕೇವಲ ಕಾಂಗ್ರೆಸ್ ಕುಟುಂಬಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಅವಮಾನ ಮಾಡುವಂತಹ ಕೆಲಸವನ್ನು ಈ ಜಿಲ್ಲೆಯ ಸಂಸದರು ಮಾಡಿದ್ದಾರೆ. ಇಂತಹ ಅಯೋಗ್ಯ ವ್ಯಕ್ತಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಂಸದರು ಎನ್ನುವುದು ನಮ್ಮ ದೌರ್ಭಾಗ್ಯವೇ ಸರಿ ಎಂದರು.

ಕೇವಲ ರಾಜೀವ್ ಗಾಂಧಿ ಮಾತ್ರವಲ್ಲ ಬಿಜೆಪಿಗರು ದೇಶದ ಪಿತಾಮಹ ಮಹಾತ್ಮ ಗಾಂಧಿಯನ್ನು ಸಹ ಅವಹೇಳನ ಮಾಡುವದರಲ್ಲಿ ಹಿಂದೆ ಬಿದ್ದಿಲ್ಲ. ಇಂತಹವರಿಗೆ ದೇಶದ ಜನತೆ ತಕ್ಕ ಪಾಠ ಕಲಿಸಬೇಕಾಗಿದೆ. ಅದೇ ರೀತಿ ನಳಿನ್ ಕುಮಾರ್ ಕಟೀಲ್ ಜಿಲ್ಲೆಯ ಜನರ ಮುಖಕ್ಕೆ ಮಸಿ ಬಳಿಯವ ಕೆಲಸ ಮಾಡಿದ್ದಾರೆ.  ನಳಿನ್ ರಾಜೀವ್ ಗಾಂಧಿಗೆ ಅವಹಹೇಳನ ಮಾಡಿದಾಗ ಇಡೀ ದೇಶದ ಜನರ ವಿರೋಧಿಸಿದಾಗ ರಾತ್ರೋ ರಾತ್ರಿ ಮಾಡಿದ ಟ್ವೀಟನ್ನು ಅಳಿಸಿ ಹಾಕುವ ಕೆಲಸ ಮಾಡಿದ್ದಲ್ಲದೆ ಜನರಿಗೆ ಹೆದರಿ ಎಲ್ಲಿಯೋ ಅಡಗಿ ಕುಳಿತಿದ್ದಾರೆ. ಇಂತಹ ವ್ಯಕ್ತಿ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಅಡಿಗ ಕುಳಿತು ಕೊಳ್ಳುವ ಪರಿಸ್ಥಿತಿ ಬರಲಿದೆ ಎಂದರು.

ರಾಜೀವ್ ಗಾಂಧಿಯವರ ಸೇವೆಯನ್ನು ಮತ್ತು ಅವರು ನೀಡಿದ ಕೊಡುಗೆಯನ್ನು ಈ ದೇಶದ ಜನ ಎಂದಿಗೂ ಮರೆಯುವುದಿಲ್ಲ. 28 ವರ್ಷಗಳಿಂದ ಕಾಂಗ್ರೆಸ್ ರಾಜೀವ್ ಗಾಂಧಿಯವರ ಸಮಯದಲ್ಲಿ ಇದ್ದ ವೈಭವವನ್ನು ಮತ್ತೆ ಮರಳಿಪಡೆಯಬೇಕಾಗಿದೆ ಅದಕ್ಕಾಗಿ ಇಡೀ ಕಾಂಗ್ರೆಸ್ ಕುಟುಂಬ ಸಂಕಲ್ಪ ಮಾಡುವ ಅಗತ್ಯವಿದೆ. ಭಾರತ ಏಕತೆ ಸಮಗ್ರತೆಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾದ ಅಗತ್ಯ ದೇಶದಲ್ಲಿ ಉದ್ಭವಾಗಿದೆ ಎಂದರು.